ಪಿಯುಸಿ ಟಾಪರ್ಸ್ ಪಟ್ಟಿಯಲ್ಲಿ ಎಸ್‌ಎಸ್‌ಎಲ್‌ಸಿ ಟಾಪರ್ಸ್ ಇರಲ್ಲ

  • In State
  • August 19, 2020
  • 167 Views
ಪಿಯುಸಿ ಟಾಪರ್ಸ್ ಪಟ್ಟಿಯಲ್ಲಿ ಎಸ್‌ಎಸ್‌ಎಲ್‌ಸಿ ಟಾಪರ್ಸ್ ಇರಲ್ಲ

ಹುಳಿಯಾರು:ಪ್ರತಿ ವರ್ಷದ ಪಿಯುಸಿ ಟಾಪರ್ಸ್ ಪಟ್ಟಿಯಲ್ಲಿ ಎಸ್‌ಎಸ್‌ಎಲ್‌ಸಿ ಟಾಪರ್ಸ್ ಬದಲಾಗಿ ಹೊಸಬರು ಇರುತ್ತಾರೆ. ಇದು ಸೋಜಗದ ಸಂಗತಿಯಾಗಿದೆ ಎಂದು ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೇಮಂತ್ ಆರ್. ಮರಿಗೌಡ್ರು ಅಚ್ಚರಿ ವ್ಯಕ್ತಪಡಿಸಿದರು.

ಹುಳಿಯಾರಿನ ಶ್ರೀ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಬುಧವಾರ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ಹುಳಿಯಾರು ಘಟಕದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಟಾಪರ್ಸ್ ಆಗುವ ವಿದ್ಯಾರ್ಥಿಗಳು ಪ್ರತಿಭಾವಂತರೆನ್ನುವುದಲ್ಲಿ ಎರಡು ಮಾತಿಲ್ಲ. ಆದರೆ ಪ್ರತಿಭಾವಂತರು ಯಾವುದೇ ಪರೀಕ್ಷೆ ಎದುರಿಸಿದರೂ ಟಾಪರ್ಸ್ ಆಗಿ ಹೊರಹೊಮ್ಮಬೇಕು. ಆದರೆ ಎಸ್‌ಎಸ್‌ಎಲ್‌ಸಿ ಟಾಪರ್ಸ್ ಪಿಯುಸಿಯಲ್ಲೂ, ಪಿಯುಸಿ ಟಾಪರ್ಸ್ ಪದವಿಯಲ್ಲೂ ಟಾಪರ್ಸ್ ಆಗುವುದಿಲ್ಲ. ಹಾಗಂತ ಹೊಸಬರು ಟಾಪರ್ಸ್ ಆಗಬಾರದಂತಲ್ಲ, ಹಳೆ ಟಾಪರ್ಸ್ ಜೊತೆ ಹೊಸಬರೂ ಸೇರಿ ಹಂತಹಂತದಲ್ಲೂ0 ಟಾಪರ್ಸ್ ಸಂಖ್ಯೆ ಹೆಚ್ಚಾದರೆ ರಾಜ್ಯದ ಕೀರ್ತಿ ಹೆಚ್ಚುತ್ತದೆ. ಹಾಗಾಗಿ ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆ, ಸರ್ಕಾರ ಈ ನಿಟ್ಟಿನಲ್ಲಿ ಅಧ್ಯಯನ ಮಾಡುವ ಅಗತ್ಯವಿದೆ ಎಂದರು.

ಇತ್ತೀಚಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮಕ್ಕಳನ್ನು ದಂಡಿಸಿದರೆ ಅಪರಾಧ ಎನ್ನುವಂತ್ತಾಗಿದೆ, ಆದರೆ ಒದೆ ತಿಂದು ಕಲಿಯುವ ಶಿಕ್ಷಣ ಮಣ್ಣಾಗುವವರೆವಿಗೂ ನೆನಪಿನಲ್ಲಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಶಿಕ್ಷಕರು ಸುಖಾಸುಮ್ಮನೆ ಮಕ್ಕಳನ್ನು ದಂಡಿಸುವುದಿಲ್ಲ, ಮಕ್ಕಳ ಮೇಲೆ ಅವರಿಗ್ಯಾವ ದ್ವೇಷವೂ ಇರುವುದಿಲ್ಲ. ಕಲಿಕೆಯಲ್ಲಿ ನಿರಾಸಕ್ತಿ ತೋರಿದಾಗ ಮಕ್ಕಳು ಕಲಿಯಲೆಂದು ಒದೆ ಕೊಡುತ್ತಾರೆ. ಹಾಗಾಗಿ ಶಿಕ್ಷಕರು ಹೊಡೆದದ್ದನ್ನು ವಿದ್ಯಾರ್ಥಿಗಳು ಪೋಷಕರಿಗೆ ಹೇಳಬಾರದು, ಮಕ್ಕಳು ಹೇಳಿದರೂ ಪೋಷಕರು ಗಂಭೀರವಾಗಿ ಪರಿಗಣಿಸಬಾರದು ಎಂದರಲ್ಲದೆ ಶಿಕ್ಷಕರೂ ಸಹ ಮಕ್ಕಳಿಗೆ ಬಲವಾದ ಪೆಟ್ಟು ಬೀಳುವಂತೆ ದಂಡಿಸದೆ ಎಚ್ಚರಿಕೆ ನೀಡಲು ಹೊಡೆಯಬೇಕಿದೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos