ಜೈಲು ಪಾಲಾದ ಯುವಕರು

ಜೈಲು ಪಾಲಾದ ಯುವಕರು

ಬೆಂಗಳೂರು, ನ. 11: ಅತಿಯಾದರೆ ಅಮೃತವೂ ವಿಷ ಎನ್ನು ಮಾತು ಮತ್ತೊಮ್ಮೆ ಸಾಬಿತಾಗಿದೆ. ಪ್ರತಿ ದಿನ ತಡರಾತ್ರಿಯಲ್ಲಿ  ಯುವಕರು ತಮ್ಮ ಮೊಜು ಮಸ್ತಿ ಮಾಡುತ್ತಾ ರಸ್ತೆಯಲ್ಲಿ ಹೊಗುತ್ತಿದ್ದ ಜನರನ್ನು ನಾನಾತರದ ವೇಷವನ್ನು ಧರಿಸಿ ಹೆದರಿಸುತ್ತಿದ್ದರು.

ಪ್ರ್ಯಾಂಕ್ ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಹಾಕಲೆಂದು 7 ಯುವಕರ ತಂಡ ನಿತ್ಯವೂ ದೆವ್ವದ ವೇಷ ಧರಿಸಿ ಯಶವಂತಪುರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ತಡರಾತ್ರಿಯಲ್ಲಿ ಜನರನ್ನು ಬೆದರಿಸುವ ಕೆಲಸ ಮಾಡುತ್ತಿತ್ತು. ಇದರಿಂದ ಹೆದರಿ, ಅಪಾಯ ಮಾಡಿಕೊಳ್ಳಲಿದ್ದವರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು 7 ಯುವಕರನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೆ, ಪ್ರ್ಯಾಂಕ್ ವಿಡಿಯೋ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮರಾ ಮತ್ತಿತರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos