ವಿಜಯದಾಸರ ಆರಾಧನಾ ಮಹೋತ್ಸವ

ವಿಜಯದಾಸರ ಆರಾಧನಾ ಮಹೋತ್ಸವ

ಬೆಂಗಳೂರು: ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀಮದ್ ಉತ್ತರಾದಿಮಠ ಮತ್ತು ಶ್ರೀನಿವಾಸ ಉತ್ಸವ ಬಳಗ (ದಾಸ ಸಾಹಿತ್ಯ ಪ್ರಚಾರ ಮಾಧ್ಯಮ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮದುತ್ತರಾದಿ ಮಠದ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಪರಮಾನುಗ್ರಹದಿಂದ ಬೆಂಗಳೂರು ಬಸವನಗುಡಿ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿರುವ ದಾಸಸಾಹಿತ್ಯ ಪಿತಾಮಹಾ ಶ್ರೀಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಸನ್ನಿಧಾನದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ಆಯೋಜಿಸಲಾಗಿತ್ತು.
ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು ನೆರವೇರಿಸಿ ದಿವ್ಯ ಸಾನಿಧ್ಯ ವಹಿಸಿದ್ದರು. ಪುರಂದರದಾಸರ ಪ್ರತಿಮೆಯ ಸುತ್ತಲೂ ಅಳವಡಿಸಿರುವ ದಾಸರ ನುಡಿಗಳ ಶಿಲಾಫಲಕ ಮತ್ತು ಮುಂಬರುವ ಪುರಂದರದಾಸರ ಆರಾಧನಾ ಮಹೋತ್ಸವದ ಕರಪತ್ರವನ್ನು ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗಾಯನ ಸಮಾಜ ಅಧ್ಯಕ್ಷ ಡಾ|| ಎಂ.ಆರ್.ವಿ ಪ್ರಸಾದ್ ಹಾಗೂ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್‌ಗೆ ಭಾಜನರಾದ ಸಾಧಕರಾದ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಟಿ.ವಾದಿರಾಜ್ , ಆಧ್ಯಾತ್ಮ ಚಿಂತಕ ಕಡೂರು ಶ್ರೀಧರಾಚಾರ್ಯ ಮತ್ತು ಖ್ಯಾತ ಜ್ಯೋತಿಷಿ ಕೆ.ಮುರಳಿಧರರನ್ನು ಅಭಿನಂದಿಸಲಾಯಿತು. ಕೆ.ಆರ್.ಪುರಂ ಹರಿದಾಸ ಸಂಘದ ಅಧ್ಯಕ್ಷ ಡಾ. ಹ.ರಾ.ನಾಗಾರಾಜಾಚಾರ್ಯ ಅಭಿನಂದನ ನುಡಿಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ಕೆ.ಆರ್.ಗುರುರಾಜಾರಾವ್ ಮೊದಲಾವರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos