ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಸರ್ಕಾರಿ ನೌಕರರು!?

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಸರ್ಕಾರಿ ನೌಕರರು!?

ಬೆಂಗಳೂರು,ಮೇ. 10,ನ್ಯೂಸ್ ಎಕ್ಸ್ ಪ್ರೆಸ್: 64 ಸರ್ಕಾರಿ ನೌಕರರು ನಕಲಿ ಅಂಕಪಟ್ಟಿ ನೀಡಿ ಕೆಲಸ ಪಡೆದಿರುವ ಆರೋಪದ ಮೇಲೆ ಬೆಂಗಳೂರಿನ ಸಿದ್ದಾಪುರ ಠಾಣೆಯಲ್ಲಿ ನೌಕರರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಸದ್ಯದಲ್ಲೇ ಈ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಕೈಗಾರಿಕಾ ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ಬಿ.ಎಲ್.ಚಂದ್ರಶೇಖರ್ ಈ ಬಗ್ಗೆ ದೂರು ನೀಡಿದ್ದಾರೆ. ದೂರಿನನ್ವಯ ಸಿದ್ದಾಪುರ ಠಾಣೆಯಲ್ಲಿ 64 ಜನರ ವಿರುದ್ಧ ಐಪಿಸಿ ಸೆಕ್ಷನ್ 419,468, 420, 471 ಮತ್ತು ಅಂಡರ್ ಸೆಕ್ಷನ್ 34ರಡಿ ಕೇಸ್ ದಾಖಲಾಗಿದೆ.

ನಕಲಿ ಮಾರ್ಕ್ಸ್ ಕಾರ್ಡ್ ನೀಡಿ ಕೆಲಸಕ್ಕೆ ಸೇರಿದ್ದಾರೆಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆ ನಕಲಿ ಅಂಕಪಟ್ಟಿ ನೀಡಿದವರ ಅಂಕಪಟ್ಟಿ ಪರಿಶೀಲನೆಗೆ ಸಮಿತಿ ರಚಿಸಿತ್ತು. ಸಮಿತಿಯ ಪರಿಶೀಲನೆಯಲ್ಲಿ ಅಕ್ರಮ ಪತ್ತೆಯಾಗಿದ್ದು, ಈ ಜಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳು ಕೂಡ ಭಾಗಿಯಾಗಿರುವುದು ಪತ್ತೆಯಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos