ಜೆಡಿಎಸ್ ನಲ್ಲಿ ಮತ್ತೆ ಬಿರು ಗಾಳಿ!?

ಜೆಡಿಎಸ್ ನಲ್ಲಿ ಮತ್ತೆ ಬಿರು ಗಾಳಿ!?

ಮಂಡ್ಯ, ಡಿ. 17: ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಉಪ ಚುನಾವಣೆ ಫಲಿತಾಂಶದ ಬಳಿಕ ಚಿತ್ರಣ ಬದಲಾಗತೊಡಗಿದೆ. ಪಕ್ಷ ತೊರೆಯಲು ಮಂಡ್ಯ ಜಿಲ್ಲೆಯ 2 ಶಾಸಕರು ಚಿಂತನೆ ನಡೆಸಿದ್ದಾರೆ.

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್ ಗೌಡ ಜೆಡಿಎಸ್ ಬಿಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇಬ್ಬರೂ ಶಾಸಕರು ವರಿಷ್ಠರ ನಡೆಯಿಂದ ಬೇಸತ್ತು ಮೊದಲೇ ಪಕ್ಷ ಬಿಡುತ್ತಾರೆ ಎಂಬ ಚರ್ಚೆ ನಡೆದಿತ್ತು. ಆದರೆ ರಾಜಕೀಯ ಭವಿಷ್ಯದ ಬಗ್ಗೆ ಹೆದರಿ ಹಿಂದೇಟು ಹಾಕಿದ್ದರು. ಕೆಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದರಿಂದ ಇಬ್ಬರು ಶಾಸಕರಲ್ಲಿ ವಿಶ್ವಾಸ ಬಂದಿದ್ದು, ಬಿಜೆಪಿ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಯಡಿಯೂರಪ್ಪ ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಲಿಗೆ ಬಿದ್ದು ಶಾಸಕ ಸುರೇಶ್ ಗೌಡ ನಮಸ್ಕರಿಸಿದ್ದರು. ಇಬ್ಬರು ಶಾಸಕರು ಬಿಜೆಪಿಗೆ ಬಂದರೆ ಮಂಡ್ಯದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದ್ದು, ಜಿಲ್ಲೆಯಲ್ಲಿ ಭದ್ರವಾಗಿ ನೆಲೆಯೂರಲಿದೆ. ಹೀಗಾಗಿ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ಲಾನ್ ಮಾಡಿಕೊಳ್ಳಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos