ಇಡೀ ದೇಶ ಹಿಂದೂ ರಾಷ್ಟ್ರ: ಒವೈಸಿ

ಇಡೀ ದೇಶ ಹಿಂದೂ ರಾಷ್ಟ್ರ: ಒವೈಸಿ

ನವದೆಹಲಿ, ನ. 9 : ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಸ್ವಾಗತ ಮಾಡಿವೆ.
ಆದರೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಸುಪ್ರೀಂ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವತ್ತಿನ ಕೋರ್ಟ್ ತೀರ್ಪಿನಿಂದ ನಂಬಿಕೆಯ ಎದುರು ಸತ್ಯಕ್ಕೆ ಸೋಲಾಗಿದೆ ಎಂದು ಬಣ್ಣಿಸಿದ ಅವರು, ದೇಶವು ಹಿಂದೂ ರಾಷ್ಟ್ರದ ಹಾದಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಇಡೀ ದೇಶವು ಹಿಂದೂ ರಾಷ್ಟ್ರ ಆಗುವತ್ತ ಸಾಗುತ್ತಿದೆ. ನಾನು ಶಾಂತಿಗೆ ವಿರುದ್ಧವಾಗಿಲ್ಲ. ಈ ದೇಶದಲ್ಲಿ ಏನೂ ಅವಘಡ ಆಗುವುದಿಲ್ಲ. ಶಾಂತಿ ಭಂಗ ಆಗಲ್ಲ. ಆದರೆ, ಸತ್ಯವನ್ನು ಮಾತನಾಡಲೇಬೇಕಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪು ಸಮಾಧಾನ ತಂದಿಲ್ಲ ಎಂದು ಕೇಳುವ ಹಕ್ಕು ನನಗಿಲ್ಲವಾ? ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲಿ ತೋರ್ಪಡಿಸುತ್ತಿದ್ದೇನೆ. ಆ ಜಾಗದಲ್ಲಿ ಮಸೀದಿ ಇದ್ದದ್ದು ನಿಜ. ಅದರಲ್ಲಿ ಯಾವುದೇ ರಾಜಿ ಎಲ್ಲ” ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos