ಸಿಗಲಿದೆ ದೇವರ ದರ್ಶನ

ಸಿಗಲಿದೆ ದೇವರ ದರ್ಶನ

ಬೆಂಗಳೂರು, ಮೇ 14 :  ವೃತ್ತಿ ಮಾತ್ರವಲ್ಲದೇ ಇತರ ಹಲವಾರು ಉಪ ವೃತ್ತಿಗಳ ಅಸಂಖ್ಯ ಜನರ ದಿನದ ಬದುಕಿಗೆ ತೀವ್ರ ತೊಂದರೆ ಉಂಟಾಗಿದೆ. ಹೀಗಾಗಿ ಕಳೆದ ವಾರ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾಗಿದ್ದ ಅರ್ಚಕರ ನಿಯೋಗ ದೇವಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಜಿಮ್, ಫಿಟ್‍ನೆಸ್ ಕೇಂದ್ರಗಳನ್ನು ಮುಂದಿನ ವಾರದಿಂದ ತೆರೆಯಲು ರಾಜ್ಯ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ , ಮುಚ್ಚಿದ್ದ ದೇವಾಲಯಗಳು ಕೂಡಾ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ.

ಸರ್ಕಾರ ಅವಕಾಶ ನೀಡಿದರೇ ದೇವಸ್ಥಾನಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಇಲಾಖೇ ಸಿದ್ಧಪಡಿಸಿದೆ ಎಂದು ವರದಿಯಾಗಿದೆ.ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮುಖ್ಯವಾಗಿ ತೀರ್ಥ, ಪ್ರಸಾದಗಳ ವಿತರಣೆಗೆ ಬ್ರೇಕ್ ಬೀಳಲಿದೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ದೇವಾಸ್ಥನಗಳು ತೆರೆದರೆ, ಅಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಭಕ್ತರು ಪಾಲಿಸಬೇಕಾಗುತ್ತದೆ. ಅದೆನೆಂದರೆ ಯಾವುದೇ ದೇವಾಲಯಗಳು ಭಕ್ತರಿಗೆ ಪ್ರಸಾದ, ತೀರ್ಥ ಕೊಡುವುದು ನಿಷಿದ್ಧ. ಇದಲ್ಲವೆನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆಲವು ದೇವಸ್ಥಾನಗಳನ್ನು ಮುಂದಿನ ವಾರದಿಂದ ಆರಂಭಿಸುವತ್ತ ಚಿತ್ತ ಹರಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos