ಈ ಬಾರಿಯೂ ಗೆಲುವು ನಮ್ಮದೆ: ಜಯಪ್ರದಾ

ಈ ಬಾರಿಯೂ ಗೆಲುವು ನಮ್ಮದೆ: ಜಯಪ್ರದಾ

ರಾಮ್ಪುರ, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ಫಲಿತಾಂಶ ಬರಲು ಕೆಲವೇ ಗಂಟೆ ಬಾಕಿಯಿದೆ. ಈಗಾಗಲೇ ಮತ ಎಣಿಕೆ ಶುರುವಾಗಿದೆ. 3 ಗಂಟೆ ಸುಮಾರಿಗೆ ಫಲಿತಾಂಶ ಬರುವ ಸಾಧ್ಯತೆ ಹೆಚ್ಚಿದೆ. ಮತ ಎಣಿಕೆ ಶುರುವಾಗುವ ಮೊದಲೇ ರಾಮ್ಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದಾ ಈ ಬಾರಿಯೂ ಗೆಲುವು ನಮ್ಮದೆ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಜಯಪ್ರದಾ, ಚುನಾವಣೋತ್ತರ ಸಮೀಕ್ಷೆಯಲ್ಲಿ ಒಳ್ಳೆ ಫಲಿತಾಂಶ ಸಿಕ್ಕಿದೆ. ಮೋದಿ ಪ್ರಧಾನಿಯಾಗ್ಬೇಕೆಂಬುದು ಎಲ್ಲರ ಇಚ್ಛೆ. ಈ ಬಾರಿಯೂ ನಮ್ಮ ಗೆಲುವು ನಿಶ್ಚಿತ. ಎಲ್ಲರ ಆಸೆ ಈಡೇರಲಿದೆ ಎಂದು ಜಯಪ್ರದಾ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos