ಸಂಕ್ರಾಂತಿ ಸಡಗರ

ಸಂಕ್ರಾಂತಿ ಸಡಗರ

ಧಾರವಾಡ, ಜ. 14 : ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಮಾತ್ರ ಇಂದಿಗೂ ಸಂಕ್ರಮಣವನ್ನು ಜಾನಪದ ಹಬ್ಬವನ್ನಾಗಿಯೇ ಆಚರಿಸಿಕೊಂಡು ಬರಲಾಗಿದೆ. ಧಾರವಾಡದ ಸಾಧನಕೆರೆ ಉದ್ಯಾನದಲ್ಲಿ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಅನ್ನೋ ವಿಶಿಷ್ಟ ಕಾರ್ಯಕ್ರಮದಲ್ಲಿ ಮರೆತು ಹೋದ ನಮ್ಮ ಜಾನಪದ ಸಂಸ್ಕೃತಿ ನೆನಪಿಗೆ ತರೋ ಪ್ರಯತ್ನ ಮಾಡಲಾಯ್ತು.

ಒಂದು ಕಡೆ ಜಾನಪದ ವಿದ್ವಾಂಸ ಬಸಲಿಂಗಯ್ಯ ಹಿರೇಮಠರಿಂದ ಜಾನಪದ ಗೀತೆಗಳ ಮಾಧುರ್ಯ ಬರುತ್ತಿದ್ದರೆ, ಅದಕ್ಕೆ ತಕ್ಕಂತೆ ಸಂಪ್ರದಾಯಿಕ ಉಡುಗೆ ತೊಟ್ಟಿದ್ದ ಮಹಿಳೆಯರು ಜಾನಪದ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ಇನ್ನು ಉಳಿದವರೆಲ್ಲ ಹಾಡಿಗೆ ಧ್ವನಿಗೂಡಿಸಿ ನೃತ್ಯಕ್ಕೆ ಚಪ್ಪಾಳೆ ತಟ್ಟಿದರು.

ಫ್ರೆಶ್ ನ್ಯೂಸ್

Latest Posts

Featured Videos