ವಿತ್ತ ಸಚಿವ ಪಿಯೂಶ್ ಗೊಯಲ್ ರಿಂದ ಚೊಚ್ಚಲ ಬಜೆಟ್ ಆರಂಭ

ವಿತ್ತ ಸಚಿವ ಪಿಯೂಶ್ ಗೊಯಲ್ ರಿಂದ  ಚೊಚ್ಚಲ ಬಜೆಟ್  ಆರಂಭ

ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅನ್ನು ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಇಂದು ಮಂಡನೆ ಆರಂಭವಾಗಿದೆ.

ಅನಾರೋಗ್ಯದಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಖಾತೆಯ ಹೊಣೆಗಾರಿಕೆಯನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಕಳೆದ ವಾರವೇ ತಾತ್ಕಾಲಿಕವಾಗಿ ವರ್ಗಾಯಿಸಲಾಗಿತ್ತು.

ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಮಧ್ಯಮ ವರ್ಗದ ಜನರಿಗೆ ಭರಪೂರ ಕೊಡಗೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಮುಖ್ಯಾಂಶಗಳು:

  • ನರೇಂದ್ರ ಮೋದಿ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಹೇಳಿದ ಪಿಯೂಷ್ ಗೊಯಲ್.
  • ಕಳೆದ ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. ಆರ್ಥಿಕ ವಲಯದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.
  • ಕಳೆದ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸರ್ಕಾರ ಹಣದುಬ್ಬರ ನಿಯಂತ್ರಣ ಮಾಡಿದೆ. ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದೆ.
  • 2022 ರ ವೇಳೆಗೆ ನ್ಯೂ ಇಂಡಿಯಾ ನಿರ್ಮಾಣ ಮಾಡುತ್ತೀವೆ.
  • ಜಿ.ಎಸ್.ಟಿ. ಮತ್ತು ಇತರೆ ತೆರಿಗೆಗಳ ಮೂಲಕ ಆದಾಯ.
  • ಕಳೆದ ಐದು ವರ್ಷಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ.
  • ದಿವಾಳಿ ಹಂತದಲ್ಲಿದ್ದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪುನಶ್ಚೇತನಗೊಳಿಸಿದ್ದೇವೆ.
  • ರೈತರ
    ಅನುಕೂಲಗಳಿಗಾಗಿ ಯೋಜನೆಗಳನ್ನು ರೂಪಿಸಿದ್ದೇವೆ.
  • ಎಫ್‍ಡಿಐ
    ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
  • ಕಳೆದ
    ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ.
  • ರೈತರ
    ಖಾತೆಗೆ ನೇರವಾಗಿ 6 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿದ್ದೇವೆ.
  • ರೈತರ  ಆದಾಯ ದುಪ್ಪಟ್ಟು ಮಾಡಿದ್ದೇವೆ.
  • ಸಣ್ಣ
    ರೈತರಿಗಾಗಿ ಪ್ರಧಾನಿ ಕಿಸಾನ್‍ ಸಮ್ಮಾನ್ ಯೋಜನೆ
  • ರಾಷ್ಟ್ರೀಯ
    ಕಾಮದೇನು ಯೋಜನೆ ಜಾರಿ

ಫ್ರೆಶ್ ನ್ಯೂಸ್

Latest Posts

Featured Videos