ರೇಷ್ಮೆ ರೈತರಲ್ಲಿ ಮೂಡಿದೆ ಮಂದ ಹಾಸ

ರೇಷ್ಮೆ ರೈತರಲ್ಲಿ ಮೂಡಿದೆ ಮಂದ ಹಾಸ

ಶಿಡ್ಲಘಟ್ಟ:ರೇಷ್ಮೆ ಕೃಷಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಕಡಿಮೆ ನೀರಿರುವ ಪ್ರದೇಶದಲ್ಲಿ ಬೆಳೆಯಲೂ ಅನುಕೂಲವಾಗಿದೆ. ಲಾಕ್ ಡೌನ್ ತೆರವುಗೊಳಿಸಿದಾಗಿನಿಂದ ಏರುಗತಿಯಲ್ಲಿರುವ ಗೂಡಿನ ಬೆಲೆಯು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದು ರೇಷ್ಮೆ ಕೃಷಿ ವಿಜ್ಞಾನಿ ವಿನೋದಾ ಹೇಳಿದರು.
ತಾಲ್ಲೂಕಿನ ಬೋದಗೂರಿನಲ್ಲಿ ಕುರುಬೂರಿನ ರೇಷ್ಮೆ ಕೃಷಿ ವಿಜ್ಞಾನ ಕಾಲೇಜು, ಕೆ.ವಿ.ಕೆ, ರೇಷ್ಮೆ ಇಲಾಖೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಗಳ ಆಶ್ರಯದಲ್ಲಿ ನಾಗೇಶ್ ಕುಮಾರ್ ಅವರ ರೇಷ್ಮೆಹುಳು ಸಾಕಣೆ ಮನೆಯಲ್ಲಿ ನಡೆದ ರೇಷ್ಮೆ ಕೃಷಿ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಕೃಷಿಯಲ್ಲಿ ಮಣ್ಣು ಪರೀಕ್ಷೆಯ ಮಹತ್ವವನ್ನು ರೇಷ್ಮೆಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಳಿನ ತಿಳಿಸಿದರೆ, ಹಿಪ್ಪುನೇರಳೆ ತೋಟದಲ್ಲಿ ಹಸಿರೆಲೆ ಗೊಬ್ಬರವನ್ನು ಬೆಳೆದು ರಾಸಾಯನಿಕಗಳ ಶೇ ೫೦ರಷ್ಟು ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಬೇಸಾಯ ಶಾಸ್ತ್ರಜ್ಞೆ ಅಮೃತ ತಿಳಿಸಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಸಿಇಒ ಜನಾರ್ದನಮೂರ್ತಿ, ಬೋದಗೂರು, ಹಿತ್ತಲಹಳ್ಳಿ, ಮಳಮಾಚನಹಳ್ಳಿ, ಗಿಡ್ನಹಳ್ಳಿ ಗ್ರಾಮಗಳ ಸುಮಾರು ೫೦ ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos