ಅಂಬೇಡ್ಕರ್ ಅವಹೇಳನ ಮಾಡಿದವರ ಮನೆ ಮುತ್ತಿಗೆ

  • In State
  • August 17, 2020
  • 184 Views
ಅಂಬೇಡ್ಕರ್ ಅವಹೇಳನ ಮಾಡಿದವರ ಮನೆ ಮುತ್ತಿಗೆ

ಬಂಗಾರಪೇಟೆ:ಅಸ್ಪೃಷ್ಯತೆ ಹೋಗಲಾಡಿಸಲು ಹಗಲಿರುಳು ಶ್ರಮ ಪಟ್ಟ ಈ ದೇಶ ಕಂಡ ಅಪ್ರತಿಮ ನಾಯಕ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರಿ ನೌಕರರು, ಜನ ಪ್ರತಿನಿದಿಗಳು ಅವಮಾನ ಮಾಡುತ್ತಿರುವುದು ಕರ್ನಾಟಕ ದಲಿತ ರೈತ ಸೇನೆಯು ತೀವ್ರವಾಗಿ ಖಂಡಿಸುತ್ತದೆ.

ಆಗಸ್ಟ್ ೧೫ ರಂದು ೭೪ನೇ ¸ದಿನಾಚರಣೆಯೆಂದು ಸಿಂದಗಿ ತಾಲ್ಲೂಕಿನ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನೊಬ್ಬನಿಗೆ ಅಂಬೇಡ್ಕರ್ ರವರ ಭಾವಚಿತ್ರವನ್ನಿಟ್ಟು ಕಾರ್ಯಕ್ರಮವನ್ನು ಮಾಡಲು ಗ್ರಾಮಸ್ಥರು ಒತ್ತಾಯಿಸಿದಾಗ ಶಾಲೆಯ ಮುಖ್ಯ ಶಿಕ್ಷಕರಾದಂತಹ ಎಸ್.ಎಸ್. ಮೋಕಾತಿ ಹಾಗೂ ಕೆಬಿಎಸ್ ಮಾಡಬಾಲ ಎಂಬುವರು ಅಂಬೇಡ್ಕರ್ ಭಾವಚಿತ್ರವನ್ನು ನಾವು ಇಡುವುದಿಲ್ಲ. ಮಕ್ಕಳಿಗೆ ತಪ್ಪು ಸಂದೇಶ ನೀಡುವುದಿಲ್ಲ. ಮಹಾತ್ಮ ಗಾಂಧೀಜಿ ಭಾವಚಿತ್ರವನ್ನಿಟ್ಟು ಪೂಜೆ ಮಾಡುತ್ತೇವೆ, ನೀವು ಏನು ಮಾಡುತ್ತೀರಾ ಮಾಡಿಕೊಳ್ಳಿ ನಮಗೆ ಸರ್ಕಾರದ ಆದೇಶವಿಲ್ಲ ಎಂದು ಅಂಬೇಡ್ಕರ್ ಅವಮಾನ ಮಾಡಿ ಸಂವಿಧಾನಕ್ಕೆ ಅಪಮಾನವನ್ನುಂಟುಮಾಡಿ ಕರ್ತವ್ಯ ಲೋಪವೆಸಗಿರುತ್ತಾರೆ.

ಮತ್ತೊಂದು ದುರಾದೃಷ್ಟ ಸಂಗತಿಯೆಂದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾವರ್ಕರ್ ದೇಶದ್ರೋಹಿಯಾಗಿದ್ದರೆ ಅಂಬೇಡ್ಕರ್ ಯಾಕಲ್ಲ ಎಂಬ ಪ್ರಶ್ನೆ ಮಾಡಿರುವುದು ಮಂಗಳೂರು ಹಿಂದೂಸ್ ಎಂಬ ಪೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುತ್ತಾರೆ, ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಪ್ರತಿಗಳನ್ನು ಸುಡುವುದು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬುದು, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಇವರಿಗೆ ಸರ್ವೇ ಸಾಧಾರಣವಾಗಿರುತ್ತದೆ, ಭಾರತ ದೇಶದಲ್ಲಿ ರಾಜ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಪತ್ರಿಕಾಂಗ ಎಂಬ ನಾಲ್ಕು ಅಂಗಗಳು ಸಂವಿಧಾನದಡಿಯಲ್ಲಿದ್ದು, ಆ ಸಂವಿಧಾನದ ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಆಗಿದ್ದು, ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಇಡೀ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ತಲೆ ತಗ್ಗಿಸುವಂತಹ ವಿಷಯವಾಗಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos