ಬೆಳ್ಳಂಬೆಳಿಗ್ಗೆ ಜೆಸಿಬಿಗಳ ಗರ್ಜನೆ: ಪೊರಕೆ ಹಿಡಿದ ಶಾಸಕರು

ಬೆಳ್ಳಂಬೆಳಿಗ್ಗೆ ಜೆಸಿಬಿಗಳ ಗರ್ಜನೆ: ಪೊರಕೆ ಹಿಡಿದ ಶಾಸಕರು

  ಬೊಮ್ಮನಹಳ್ಳಿ, ಜ. 25: ಹಲವು ವರ್ಷಗಳಿಂದ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ಫುಟ್ ಪಾತ್ ಅಂಗಡಿಗಳನ್ನು ಜಂಟಿ ಆಯುಕ್ತ ರಾಮಕೃಷ್ಣ ಅವರ ನೇತೃತ್ವದ ತಂಡ ತೆರವುಗೊಳಿಸುವ ಮೂಲಕ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ವಲಯದಲ್ಲಿ ಎಚ್‌ಎಸ್‌ಆರ್ ವಾರ್ಡ್ನಲ್ಲಿ  ಇಂದು ಬೆಳ್ಳಂಬೆಳಗ್ಗೆ ಜೆಸಿಬಿಗಳ ಗರ್ಜನೆಯ ಮೂಲಕ ರಸ್ತೆ ಬದಿ ಅನಧಿಕೃತವಾಗಿ ಇರುವಂತಹ ಫುಟ್‌ಪಾತ್ ಪೆಟ್ಟಿಗೆ ಅಂಗಡಿಗಳು ಹಾಗೂ ಫುಟ್ಪಾತ್  ತೆರವುಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪೌರಕಾರ್ಮಿಕರೊಂದಿಗೆ ಕಾಫಿ ಕುಡಿಯುವ ಮೂಲಕ ಸ್ವಚ್ಛತಾ ಆಂದೋಲನವನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಸತೀಶ್ ರೆಡ್ಡಿ ಅವರು ಚಾಲನೆ ನೀಡಿದರು. ನಂತರ ಶಾಸಕ ಸತೀಶ್ ರೆಡ್ಡಿ ಅವರು ಸ್ವಯಂಪ್ರೇರಿತವಾಗಿ ಪೊರಕೆ ತೆಗೆದುಕೊಂಡು ರಸ್ತೆಯಲ್ಲಿ ಕಸ ಗುಡಿಸುವ ಮೂಲಕ ಕಾರ್ಮಿಕರಲ್ಲಿ ಸ್ವಚ್ಚತೆಯ ಅರಿವು ಹಾಗೂ ಎಚ್ಚರಿಕೆ ಉಂಟುಮಾಡಿದ್ದಾರೆ. ಒಂದು ರೀತಿಯಲ್ಲಿ ಕಾರ್ಮಿಕರಲ್ಲಿ ಪರಸ್ಪರ ಹೊಂದಾಣಿಕೆ ಸಹೋದರತ್ವ ಭಾವದೊಂದಿಗೆ ಸಮಾನತೆ ಮೂಡಿಸುವ ನಿಟ್ಟಿನಲ್ಲಿ ಕಾರ್ಮಿಕರೊಂದಿಗೆ ಕೆಲಸ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜಂಟಿ ಆಯುಕ್ತರಾದ ರಾಮಕೃಷ್ಣ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಹಲವಾರು ಭಾಗಗಳಿಂದ ಪೌರಕಾರ್ಮಿಕರು ಸುಮಾರು 300ಕ್ಕೂ ಹೆಚ್ಚು ಮಂದಿ ಬೀದಿ ಸ್ವಚ್ಚತೆಗೊಳಿಸುವ ಮೂಲಕ ಸ್ವಚ್ಚತಾಂದೋಲನದಲ್ಲಿ ಪಾಲ್ಗೊಂಡಿದ್ದರು. ಸ್ವಯಂಘೋಷಿತ ಸೋಶಿಯಲ್ ವರ್ಕರ್ಸ್ ಸಿಟಿಜನ್ ಫೋರಂ ಮುಖ್ಯಸ್ಥೆ ಶಾಂತಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಹಾಗೂ, ಚಂದ್ರಶೇಖರ್ ಎಚ್‌ಎಸ್‌ಆರ್ ಫಾರಿನ್ ರೆಡ್ ಮಿಷನ್ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಸುಮಾರು ವಲಯಗಳಿಂದ ಪೌರಕಾರ್ಮಿಕರು ಸ್ವಚ್ಚತಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿ ಬೀದಿ ಮತ್ತು ಗಲ್ಲಿಗಳಲ್ಲಿ ಅನುಪಯುಕ್ತ ವಸ್ತುಗಳನ್ನು ತರೆವು ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.  ಇದೇ ಸಂದರ್ಭದಲ್ಲಿ ರಸ್ತೆ ಬೀದಿ ಬದಿಯಲ್ಲಿ ಇರುವಂತಹ ಕಸವನ್ನು ಶುದ್ಧಗೊಳಿಸುವ ಮೂಲಕ ಹಲವಾರು ರೀತಿಯಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಯಿತು.ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ಆರೋಗ್ಯಕರ ವಾತಾರಣ ನಿರ್ಮಾಣಗೊಂಡು ಯಾವುದೇ ರೀತಿಯ ರೋಗರುಜಿನಗಳಿಂದ ನಮ್ಮಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಸತೀಶ್ ರಡ್ಡಿಯವರು ಸಾರ್ವಜನಿಕರು ಸ್ವಚ್ಚತಾ ಆಂದೋಲನದಲ್ಲಿ ಪಾಲ್ಗೊಂಡಿದ್ದ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ತಿಳಸಿದರು. ಅಶುಚಿತ್ವದಿಂದಾಗಿ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಪ್ರತಿಯೊಬ್ಬರೂ ತಮ್ಮ ವಾಸಸ್ಥಳದ ಸುತ್ತಮುತ್ತ ಅಚ್ಚುಕಟ್ಟಿನ ವಾತಾವಾರಣವಿದ್ದರೆ ಯಾವುದೇ ರೀತಿಯ ರೋಗಗಳು ಹರಡುವುದಿಲ್ಲವೆಂದು ಶಾಸಕ ಸತೀಶ್ ರೆಡ್ಡಿಯವರು ಮನವರಿಕೆ ಮಾಡಿಕೊಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos