ಕ್ರಿಯಾಶಿಲರನ್ನಾಗಿ ಮಾಡುವುದೇ ಮೇಳದ ಉದ್ದೇಶ

ಕ್ರಿಯಾಶಿಲರನ್ನಾಗಿ ಮಾಡುವುದೇ ಮೇಳದ ಉದ್ದೇಶ

ಕೆ.ಆರ್.ಪುರ, ಜ. 07: ಪರಿಸರದಲ್ಲಿ ಹಲವು ವೈಜ್ಞಾನಿಕ ವಿಚಾರಗಳು, ಕುತೂಹಲ ಹಾಗೂ ಕೌತುಕಗಳು ಅಡಗಿದ್ದು, ಅದನ್ನು ವಿದ್ಯಾರ್ಥಿಗಳು ಗುರುತಿಸಿ ಕ್ರಿಯಾಶೀಲರಾಗಿ ತಯಾರು ಮಾಡುವುದೇ ಮೇಳದ ಉದ್ದೇಶ ಎಂದು ದಕ್ಷಿಣ ವಲಯದ ಉಪನಿರ್ದೇಶಕ ಎಸ್‌. ರಾಜೇಂದ್ರ ಅವರು ತಿಳಿಸಿದರು.

ಕೆ.ಆರ್.ಪುರದ ಕರ್ನಾಟಕ ಪಬ್ಲಿಕ್  ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳನ್ನು ಕ್ರೀಯಾಶೀಲರನ್ನಾಗಿ ಮಾಡಿ ಅವರಲ್ಲಿ ಕುತೂಹಲ ಹುಟ್ಟಿಸಿದರೆ ಮಹಾನ್ ಜ್ಞಾನಿಗಳಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ  ಸರ್ಕಾರಿ ಶಾಲೆಗಳು ಉನ್ನತ ದರ್ಜೆಗೆ ತಲುಪುತ್ತಿವೆ ಎಂದು ತಿಳಿಸಿದರು.

ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಿದ್ದು ಪೊಷಕರು ಖಾಸಗಿ ಶಾಲೆಗಳತ್ತ ಸಾಗುತ್ತಿರುವುದು ಬೇಸರದ ಸಂಗತಿ, ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುವ ಮೂಲಕ ಮಾದರಿಯಾಗಿವೆ ಎಂದು ತಿಳಿಸಿದರು.

ಓದು, ಬರಹ, ಪರೀಕ್ಷೆ ಸೇರಿದಂತೆ ಇಂತಹ ಮಕ್ಕಳ ವಿಜ್ಞಾನ ಹಬ್ಬವನ್ನು ಮಾಡಿದ್ದಾರೆ ಅವರ ಕಲಿಕೆಗೆ ಸಹಕಾರಿಯಾಗುತ್ತದೆ ಜೊತೆಗೆ ಸಾಮಾಜಿಕವಾಗಿ, ಸಮುದಾಯವಾಗಿ ಮಕ್ಕಳಲ್ಲಿ ಇರುವ ಸೃಜನಶೀಲತೆ ಹೊರತರಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೂರ್ವ ತಾಲೂಕು ಶಿಕ್ಷಣಾದಿಕಾರಿ ಹನುಮಂತರಾಯ, ಪ್ರಾಂಶುಪಾಲರಾದ ಆನಂದ್ ರಾಜ್,   ಎಸ್.ಡಿ.ಎಂ.ಸಿ ಅಧ್ಯಕ್ಷ ಇಟಾಚಿ ಮಂಜುನಾಥ್ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos