ಪಿಂಚಣಿ ಹಣ ಬಂದಿಲ್ಲ

ಪಿಂಚಣಿ ಹಣ ಬಂದಿಲ್ಲ

ದೇವನಹಳ್ಳಿ, ಸೆ. 9: ಸರ್ಕಾರವು ಪ್ರತಿ ತಿಂಗಳು ಸಾಮಾಜಿಕ ಭದ್ರತೆಯೋಜನೆಯಡಿ ವಯಸ್ಸಾದ ವಯೋವೃದ್ಧರಿಗಾಗಿ ಪಿಂಚಣಿ ಭಾಗ್ಯ ಕಲ್ಪಿಸಿದ್ದು, ವಿಳಂಬವಾಗಿ ಬರುತ್ತಿರುವುದರಿಂದ ಅರ್ಹ ಫಲಾನುಭವಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರವು ವೃದ್ಯಾಪ್ಯವೇತನ, ಸಂದ್ಯಾ ಸುರಕ್ಷಾ, ವಿದವಾ ವೇತನ, ಅಂಗವಿಕರಲ ವೇತನ ಹಾಗೂ ರೈತ ಮಹಿಳೆಯರಿಗೆ ಆಸೀಡ್ ದಾಳಿಗೆ ಒಳಗಾದವರಿಗೆ ಮಾಸಿಕ ಪಿಂಚಣಿಯನ್ನು ಜಾರಿಗೆ ತಂದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಫಲಾನುಭವಿಗಳಿಗೆ ಪಿಂಚಣಿ ತಲುಪಿಲ್ಲ. ಅಧಿಕಾರಿಗಳ ಬೇಜಾವಾಬ್ದಾರಿ ಎಷ್ಟರ ಮಟ್ಟಿಗೆ ಇದೆ ಎಂಬುವುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಪಿಂಚಣಿದಾರರ ಅಳಲಾಗಿದೆ.

ಬದುಕಿಗೆ ಪಿಂಚಣಿ ಹಣವೇ ಆಧಾರವಾಗಿದೆ

ಬದುಕಿಗೆ ಪಿಂಚಣಿ ಹಣವೇ ಆಧಾರವಾಗಿದೆ. 70 ವರ್ಷದ ಇಳಿ ವಯಸ್ಸಿನಲ್ಲಿ ಕೂಲಿಗೆ ಹೋಗಲು ಸಾಧ್ಯವಿಲ್ಲ. ಜೀವನದ ತುತ್ತಿಗೆ ವಯೋ ಸಹಜ ಕಾಯಿಲೆಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಸಕಾಲದಲ್ಲಿ ಪಿಂಚಣಿ ಸಿಗದಿದ್ದರೆ ಬದುಕು ದುಸ್ಥರವಾಗುತ್ತದೆ ಎಂದು ಪಿಂಚಣಿದಾರರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಉಪಖಜಾನೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನಲ್ಲಿ ವಿವಿಧ ವರ್ಗಗಳ ವ್ಯಾಪ್ತಿಯಲ್ಲಿ ಪಿಂಚಣಿದಾರರ ಒಟ್ಟು ಸಂಖ್ಯೆ 21,441 ಈ ಪೈಕಿ 13,233 ಫಲಾನುಭವಿಗಳು ಅಂಚೆ ಮೂಲಕ ಪಿಂಚಣಿ ಪಡೆಯುತ್ತಿದ್ದು, ಉಳಿಕೆ 8,119 ಅರ್ಹ ಫಲಾನುಭವಿಗಳು ಬ್ಯಾಂಕಿನಲ್ಲಿ ಖಾತೆ ಮೂಲಕ ಪಿಂಚಣಿ ಪಡೆದುಕೊಳ್ಳುತ್ತಿದ್ದಾರೆ. ಶೇ.75ಕ್ಕಿಂತ ಹೆಚ್ಚು ದೈಹಿಕ ನ್ಯೂನತೆ ಇರುವ ಅಂಗವಿಕಲರಿಗೆ ಮಾಸಿಕ 1,400ರೂ. ಹೊರತುಪಡಿಸಿದರೆ ಇತರೆ ಎಲ್ಲಾ ಫಲಾನುಭವಿಗಳಿಗೆ 600ರೂ. ಬರುತ್ತಿದೆ ಎಂದು ಉಪಖಜಾನೆ ಅಧಿಕಾರಿಗಳು ಹೇಳುತ್ತಾರೆ.

ಮುನಿತಾಯಮ್ಮ ಪಿಂಚಣಿದಾರೆ

ಒಂದೂವರೆ ವರ್ಷದಿಂದ ಬಿಡಿಗಾಸೂ ಸಹ ಬಂದಿರುವುದಿಲ್ಲ, ಖಜಾನೆ ಅಧಿಕಾರಿಗಳನ್ನು ಮಾಹಿತಿ ಕೇಳಿದರೆ ನೀವು ಸಲ್ಲಿಸಿರುವ ಅರ್ಜಿ ನಮಗೆ ಬಂದಿಲ್ಲ, ಕಂದಾಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಎಲ್ಲಾ ತಿಂಗಳ ಹಣ ಒಟ್ಟಿಗೆ ಬರುತ್ತದೆ ಚಿಂತಿಸಬೇಡಿ ಎಂದು ಅರಕೆ ಉತ್ತರಗಳನ್ನು ನೀಡುತ್ತಾರೆ. ಮೂಗಿಗೆ ತುಪ್ಪ ಸವರುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಆರು ತಿಂಗಳಿನಿಂದ ಪಿಂಚಣಿ ಹಣ ಬಂದಿಲ್ಲ, ಅಂಗವಿಕಲರಾದ ಹನಿಗಣ್ಣಾದರು. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನ ಪಿಂಚಣಿಗೆ ಕಾಯುವಂತೆ ಆಗಿದೆ. ಪಿಂಚಣಿ ಹಣ ಸಕಾಲದಲ್ಲಿ ಬಂದರೆ ಅನುಕೂಲವಾಗುತ್ತದೆ. ಕಡೆಯ ದಿನದಲ್ಲಿ ಈ ಹಣದಿಂದ ಒಂದಿಷ್ಟು ಉಪಯೋಗವಾಗುತ್ತದೆ. ಹಣ ಬರದಿದ್ದರೆ ಹೇಗೆ ಬದುಕು ಸಾಧಿಸಬೇಕು.

ರಾಮಪ್ಪ ಪಿಂಚಣಿದಾರ

ರಜ್ಯದಲ್ಲಿ 441 ಕ್ಷ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕವಾಗಿ ಅರ್ಹ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಬ್ಯಾಂಕ್ ಖಾತೆ ಹೊಂದಿರಬೇಕು. ಪ್ರಸ್ತುತ ಇಡೀ ರಾಜ್ಯದಲ್ಲಿ ಪಿಂಚಣಿದಾರರು ಕೆ2  ಅಡಿಯಲ್ಲಿ ತರಲು ಗಣಕೀಕರಣ ವ್ಯವಸ್ಥೆ ನಡೆಯುತ್ತಿದೆ. ಉಪ ಖಜಾನೆ ಅಧಿಕಾರಿ ನರಸಿಂಹ ಅವರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos