ಮಹಿಳೆಯ ಬರ್ಬರ ಹತ್ಯೆ

ಮಹಿಳೆಯ ಬರ್ಬರ ಹತ್ಯೆ

ಕೋಲ್ಕತಾ, ಡಿ. 13 : ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ 60 ವರ್ಷದ ಮಹಿಳೆಯ ತಲೆಕತ್ತರಿಸಿ, ಹೊಟ್ಟೆಯನ್ನು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಕ್ಷಿಣ ಕೋಲ್ಕತಾದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮೂಲತಃ ಪಂಜಾಬ್ ಮೂಲದ ಉರ್ಮಿಳಾ ಕುಮಾರಿ (60ವರ್ಷ) ದಕ್ಷಿಣ ಕೋಲ್ಕತಾದ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಘಟನೆ ನಡೆದ ವೇಳೆ ಮಕ್ಕಳು ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ದೆಹಲಿಯಿಂದ ಹೊರಗೆ ಹೋಗಿರುವುದಾಗಿ ಪೊಲೀಸರು ವಿವರಿಸಿದ್ದಾರೆ. ಎರಡು ದಿನಗಳಿಂದ ಮನೆಯಲ್ಲಿ ಈಕೆ ಒಬ್ಬರೇ ವಾಸವಾಗಿದ್ದರು. ನಾವು ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಇದೊಂದು ಲಾಭದ ಅಥವಾ ಸೇಡಿನ ಹಿನ್ನೆಲೆಯಲ್ಲಿ ನಡೆದ ಕೊಲೆಯಾಗಿದೆ. ನಾವು ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಮುರಳೀಧರ್ ಶರ್ಮಾ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos