ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿನಿ ಕೊಲೆ

ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿನಿ ಕೊಲೆ

ವಾಷಿಂಗ್ಟನ್, ನ.26 : ಅಮೆರಿಕದ ಚಿಕಾಗೋದಲ್ಲಿ 19 ವರ್ಷದ ಭಾರತೀಯ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿ ಉಸಿರುಗಟ್ಟಿಸಿ ಕೊಂದಿರುವ ಘಟನೆ ನಡೆದಿದೆ. ಅತ್ಯಾಚಾರ ಮತ್ತು ಕೊಲೆಯಾದ ರುಥ್ ಜಾರ್ಜ್ ಹೈದರಾಬಾದ್ ಮೂಲದವರು. ಕೃತ್ಯದಿಂದ ಅಮೆರಿಕಾದಲ್ಲಿರುವ ಭಾರತೀಯ ಸಮುದಾಯ ದಿಗ್ಭ್ರಮೆಗೊಂಡಿದೆ. ಅತ್ಯಾಚಾರ ಮತ್ತು ಕೊಲೆಯಾದ ರುಥ್ ಜಾರ್ಜ್ ಹೈದರಾಬಾದ್ ಮೂಲದವರಾಗಿದ್ದು, ಇಲಿನೋಯ್ಸ್ ವಿಶ್ವವಿದ್ಯಾಲಯದ ಹಾನರ್ಸ್ ವಿದ್ಯಾರ್ಥಿಯಾಗಿದ್ದರು. ಕಾಲೇಜು ಕ್ಯಾಂಪಸ್ನ ಗ್ಯಾರೇಜಿನಲ್ಲಿ ತಮ್ಮ ಕುಟುಂಬದ ಕಾರಿನ ಹಿಂಭಾಗದಲ್ಲಿ ರುಥ್ ಅವರ ಮೃತದೇಹ ಪತ್ತೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos