ಮಳೆರಾಯನ ಆರ್ಭಟಕ್ಕೆ ಜನ ಜೀವನ ಕಂಗಾಲು

ಮಳೆರಾಯನ ಆರ್ಭಟಕ್ಕೆ ಜನ ಜೀವನ ಕಂಗಾಲು

ಹೈದರಾಬಾದ್, ಸೆ. 26: ಸತತವಾಗಿ ಎರಡು ದಿನಗಳಿಂದ ತೆಲಂಗಾಣದ ಹೈದರಾಬಾದ್ ನಲ್ಲಿ ಭಾರೀ ಮಳೆಯಾಗುತ್ತಿದ್ದು, ಸೆಪ್ಟೆಂಬರ್ನಲ್ಲಿ 100 ವರ್ಷಗಳಿಂದೀಚೆಗೆ ಇಷ್ಟು ಪ್ರಮಾಣದ ಮಳೆಯಾಗಿರಲಿಲ್ಲ ಎನ್ನಲಾಗುತ್ತಿದೆ.

ಶತಮಾನ ಕಂಡ ಭಾರೀ ಮಳೆಯಾಗಿರುವುದರಿಂದ ಹೈದರಾಬಾದ್ ಜನ ಕಂಗಾಲಾಗಿದ್ದಾರೆ. 100 ವರ್ಷಗಳಿಂದ ಈಚೆಗೆ ಸೆಪ್ಟೆಂಬರ್ನಲ್ಲಿ ಬಂದ ಅತ್ಯಧಿಕ ಮಳೆ ಎಂಬ ದಾಖಲೆಗೂ ನಿನ್ನೆಯ ಮಳೆ ಸಾಕ್ಷಿಯಾಗಿದೆ. ಈ ಬಗ್ಗೆ ಖುದ್ದು ತೆಲಂಗಾಣ ಸಚಿವ ಕೆಟಿ ರಾಮರಾವ್ ಟ್ವೀಟ್ ಮಾಡಿದ್ದು, ‘100ಕ್ಕೂ ಹೆಚ್ಚು ವರ್ಷಗಳಿಂದ ಈ ಪ್ರಮಾಣದ ಮಳೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ನಾವು ನೋಡಿರಲಿಲ್ಲ. ಮಳೆಯಿಂದ ಆವೃತವಾಗಿದ್ದ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಕಾರ್ಯಾಚರಣೆ ನಡೆಸಿದ ಎಲ್ಲರ ಪರಿಶ್ರಮಕ್ಕೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos