ಅದ್ದೂರಿ ಕನ್ನಡ ರಾಜ್ಯೋತ್ಸವ

ಅದ್ದೂರಿ ಕನ್ನಡ ರಾಜ್ಯೋತ್ಸವ

ಬೊಮ್ಮನಹಳ್ಳಿ , ನ. 30: ಭುವನೇಶ್ವರಿ ಅಗರ ನಾಗರೀಕರ ಹಿತರಕ್ಷಣಾ ವೇದಿಕೆ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಅಗರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಾಜಿಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯರಾದ ಡಿ. ಕುಪೇಂದ್ರ ರೆಡ್ಡಿಯವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಪಕ್ಷದ ಸಿದ್ದಾಂತದ ಮೇರೆಗೆ ಚುನಾವಣೆಯಲ್ಲಿ ಹೆಚ್ಚಿನ ಸೀಟನ್ನು ನಮ್ಮ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಂತರ ಮಾತನಾಡಿದ ರಾಮಲಿಂಗಾರೆಡ್ಡಿಯವರು ಗ್ರಾಮದ ಹಲವರಿಗೆ ಸದುಪಯೋಗವಾಗುವಂತೆ ಆರೋಗ್ಯ ಶಿಬಿರವನ್ನೇರ್ಪಡಿಸಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವುದೆಂಬ ವಿಶ್ವಾಸ ನನಗಿದೆ ಎಂದರು. ಈ ಬಾರಿ ಉಪಚುನಾವಣೆಯ ನಂತರ ಮೈತ್ರಿ ಸರ್ಕಾರ ರಚನೆಯಾಗುತ್ತಾ ಎಂಬ ಪ್ರಶ್ನೆಗೆ, ಹೈಕಮಾಂಡ್ ನಿರ್ಧರಿಸಿದರೇ ಸಾಧ್ಯವಷ್ಟೇ. ಪಕ್ಷದ ವರಿಷ್ಠರ ನಿರ್ಧಾರದ ಮೇರೆಗೆ ಸರ್ಕಾರ ರಚನೆಯಾಗಲೂಬಹುದೂ ಅಥವಾ ಆಗದೆಯೂ ಇರಬಹುದು. ಈ ಎಲ್ಲಾ ಸಾಧ್ಯತೆಗಳೂ ಉಪಚುನಾವಣೆಯ ಫಲಿತಾಂಶದ ಆಧಾರದ ಮೇರೆಗೆ ನಿರ್ಧಾರವಾಗಲಿದೆ ಎಂದರು ನುಡಿದರು.

ಮಾಜಿ ನಗರಸಭಾ ಸದಸ್ಯ ಕೆ. ರಮೇಶ್‌ರವರು ಮಾತನಾಡುತ್ತಾ, ಅಗರ ಗ್ರಾಮದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಬಡವರಿದ್ದು, ಆ ಪೈಕಿ ಸುಮಾರು 2000ಕ್ಕೂ ಅಧಿಕಮಂದಿ ಈ ಆರೋಗ್ಯ ಶಿಬಿರಕ್ಕೆ ಆಗಮಿಸಿದ್ದಾರೆ.  ಅವರ ಆರೋಗ್ಯದ ಹಿತದೃಷ್ಟಿಯಿಂದ ಸುಮಾರು 8೦ ಕ್ಕೂ ಹೆಚ್ಚು ವಿವಿಧ ವೈದ್ಯರನ್ನು ಖಾಸಗಿ ಆಸ್ಪತ್ರೆಗಳಿಂದ ಕರೆಸಲಾಗಿದೆ. ಚರ್ಮರೋಗ ತಜ್ಞರು, ನೇತ್ರ ತಜ್ಞರು, ಕ್ಷ ಕಿರಣ ತಜ್ಞರು ಮೂಳೆ ತಜ್ಞರು, ಮಕ್ಕಳ ತಜ್ಞರು, ಮಹಿಳಾ ತಜ್ಞರುಗಳು ಬಂದಿದ್ದಾರೆ. ಉಚಿತ ತಪಾಸಣೆಯೊಂದಿಗೆ ಔಷದೋಪಚಾರಗಳನ್ನು ನೀಡಲಾಗುತ್ತದೆ. ಒಂದು ವೇಳೆ ಇನ್ನೂ ಹೆಚ್ಚಿನ ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆ ಬೇಕಿದ್ದಲ್ಲಿ ಸಂಘದ ವತಿಯಿಂದ ಆರ್ಥಿಕ ನೆರವನ್ನು ನೀಡಲಾಗುವುದೆಂದರು.

ಬೆಂಗಳೂರು ನಗರ ಜಿಲ್ಲೆ ಕಾಂಗ್ರೆಸ್ ಉಪಾಧ್ಯಕ್ಷರಾದ ಚಿಕ್ಕಣ್ಣ, ಬೆಂಗಳೂರು ನಗರ ಜಿಲ್ಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ ಉಪಸ್ಥಿತರಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos