ಜ್ಞಾನಪೀಠ ಪ್ರಶಸ್ತಿ ನಮ್ಮ ಹೆಮ್ಮೆ

ಜ್ಞಾನಪೀಠ ಪ್ರಶಸ್ತಿ ನಮ್ಮ ಹೆಮ್ಮೆ

ಮಹದೇವಪುರ: ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ದೊರಕಿರುವುದು ನಮ್ಮ ಹೆಮ್ಮೆ, ಈ ಭಾಷೆಯ ಹಿರಿಮೆಯನ್ನು ಯುವಪೀಳಿಗೆ ಮತ್ತಷ್ಟು ಹೆಚ್ಚಿಸಬೇಕೆಂದು ಕರ್ನಾಟಕ ಲೇಬರ್ ಅಸೋಸಿಯೇಷನ್ ರಾಜ್ಯಾದ್ಯಕ್ಷ ಸುಧಾಕರ್ ಯಾದವ್ ತಿಳಿಸಿದರು.
ಕರ್ನಾಟಕ ಲೇಬರ್ ಅಸೋಸಿಯೇಷನ್ ಸಂಘದ ರಾಜ್ಯ ಕಾರ್ಯದರ್ಶಿ ಶಿವಕುಮಾರ್ ಹಾಗೂ ಪಧಾದಿಕಾರಿಗಳ ವತಿಯಿಂದ ಐಟಿಪಿಎಲ್ ಬಳಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ತಾಯಿ ಭುವನೇಶ್ವರಿ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗ ಬೇಕೆಂದು ಎಂದು ತಿಳಿಸಿದರು.
ಐಟಿಬಿಟಿಯ ಮುಖ್ಯ ಭಾಗವಾದ ವೈಟ್ ಫಿಲ್ಡ್ ನಲ್ಲಿ ಹೆಚ್ಚಾಗಿ ಹೊರ ರಾಜ್ಯ ಹಾಗೂ ದೇಶದ ಜನರು ವಾಸವಿದ್ದು ಅವರಿಗೆ ಕನ್ನಡ ಭಾಷೆಯ ಕೀರ್ತಿಯನ್ನು ಅನ್ಯಭಾಷಿಕರಿಗೆ ಕಲಿಸುವ ಮೂಲಕ ಕನ್ನಡ ಭಾಷೆಯ ಹಿರಿಮೆ ಹೆಚ್ಚಿಸುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಮುಖಂಡ ಹರಿಕೃಷ್ಣ ಯಾದವ್, ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗೆ ಹೋದಾಗ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಕನ್ನಡ ಗಂಧವನ್ನು ಹಬ್ಬಿಸುವಂತೆ ಸಲಹೆ ನೀಡಿದರು.
ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಗೆ ಮಾತ್ರ ಸ್ಥಿಮೀತವಾಗಿಸದೆ ಪ್ರತಿನಿತ್ಯ ಕನ್ನಡ ಆಚರಿಸುವ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮೀಸಬೇಕೆಂದರು.

ಫ್ರೆಶ್ ನ್ಯೂಸ್

Latest Posts

Featured Videos