ಹೆಚ್ಚುತ್ತಿರುವ ಕಾಡಾಣೆ ಹಾವಳಿ!

ಹೆಚ್ಚುತ್ತಿರುವ ಕಾಡಾಣೆ ಹಾವಳಿ!

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುವುದನ್ನು ಎಲ್ಲರೂ ಗಮನಿಸಿದ್ದೇವೆ ಏಕೆಂದರೆ ನಾವು ಮನುಷ್ಯರು ಕಾಡನ್ನೆಲ್ಲ ನಾಶ ಮಾಡಿ ಮನೆಗಳನ್ನು ಹಾಗೂ ಹಲವಾರು ವಿವಿಧ ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತಿದ್ದೇವೆ ನಾವು ಕಾಡನ್ನು ನಾಶ ಮಾಡಿದರೆ ಪ್ರಾಣಿಗಳು ಎಲ್ಲಿ ವಾಸ ಮಾಡುತ್ತವೆ ಆದ್ದರಿಂದ ಪ್ರಾಣಿಗಳು ಆಹಾರ ಹುಡುಕಿಕೊಂಡು ಊರುಗಳತ್ತ ಬರುತ್ತಿದ್ದಾವೆ ಇದೇ ತರಹ ಚಿಕ್ಕಬಳ್ಳಾಪುರ ತಾಲೂಕಿನ ನೂತನ ಮೆಡಿಕಲ್ ಕಾಲೇಜ್ ಬಳಿ. ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೋಮವಾರ ಪ್ರತ್ಯಕ್ಷಗೊಂಡಿದ್ದ ಕಾಡಾನೆಗಳು ಕಟ್ಟೆದೊಡ್ಡಿ ಗ್ರಾಮದ ಬಳಿ ಬೀಡು ಬಿಟ್ಟಿವೆ.
ಮದ್ದೂರಿನ ಕೋಡಿಹಳ್ಳಿ ಬಳಿ ಸೆಪ್ಟೆಂಬರ್ 25ರಂದು ಕಾಣಿಸಿಕೊಂಡ ಕಾಡಾನೆಗಳು ಒಂದು ವಾರದಿಂದ ಮದ್ದೂರು ಮತ್ತು ಮಂಡ್ಯ ತಾಲೂಕಿನ ವಿವಿಧೆಡೆ ರೈತರ ಜಮೀನುಗಳ ಮೇಲೆ ದಾಳಿ ಮಾಡುತ್ತಿವೆ.
ನೆನ್ನೆ ಸಂಜೆಯಿಂದಲೇ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ರಾತ್ರಿಯಿಂದ ಮುಂಜಾನೆ 3 ಗಂಟೆವರೆಗೆ ಆನೆ ಕಾಡಿಗಟ್ಟಲು ವಿಶೇಷ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು.
ಆನೆಗಳು ಮಾತ್ರ ಕೇವಲ 10 ಕಿ.ಮೀ ದೂರದ ಕಟ್ಟೆದೊಡ್ಡಿ ಗ್ರಾಮದವರೆಗೆ ತಲುಪಲು ಸಾಧ್ಯವಾಗಿದೆ. ಚಿಕ್ಕಮಂಡ್ಯದಿಂದ ಬೂದನೂರು ವರೆಗೂ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳ ತಂಡ ಇದೀಗ ಕಟ್ಟೇದೊಡ್ಡಿಯ ಕಬ್ಬಿನ ಗದ್ದೆಯಲ್ಲೆ ಬೀಡು ಬಿಡುವಂತೆ ಮಾಡಿದ್ದಾರೆ. ಆನೆಗಳು ಮತ್ತೆ ಕಾಡಿಗೆ ಹೋಗಲು ಸತಾಯಿಸುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲೆನೋವಾಗಿದೆ.
ತಾಲೂಕಿನ ಬೂದನೂರು ರೇಲ್ವೆ ಟ್ರಾಕ್ ಬಳಿ ಆನೆಗಳು ಕೆಲಕಾಲ ಇದ್ದ ಕಾರಣ ಕಾರ್ಯಾಚರಣೆಗೆ ಕೆಲಕಾಲ ತಡೆ ಉಂಟಾಗಿದೆ. ಕಟ್ಟೆದೊಡ್ಡಿಯಲ್ಲೇ ಅರಣ್ಯ ಅಧಿಕಾರಿಗಳು ಬೀಡು ಬಿಟ್ಟು ಆನೆಗಳ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಬೆಂಗಳೂರು – ಮೈಸೂರು ಹೆದ್ದಾರಿ ಪಕ್ಕದಲ್ಲೇ ಕಟ್ಟೇದೊಡ್ಡಿ ಗ್ರಾಮವಿದ್ದು, ಆನೆಗಳು ಮತ್ತೆ ಮಂಡ್ಯ ನಗರದತ್ತ ಕದಲದಂತೆ ಎಚ್ಚರ ವಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos