ಸರಕಾರಿ ಕಾಲೇಜಿನ ಕ್ಲಾಸ್ ರೂಮ್ ಸಮಸ್ಯೆ

ಸರಕಾರಿ ಕಾಲೇಜಿನ ಕ್ಲಾಸ್ ರೂಮ್ ಸಮಸ್ಯೆ

ಧಾರವಾಡ, ಫೆ. 01: ಕಳೆದ ಎರಡು ವರ್ಷಗಳಿಂದ ಕ್ಲಾಸ್ ರೂಮ್ ಸಮಸ್ಯೆ ಎದುರಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕ್ಲಾಸ್ ರೂಮ್ ಇಲ್ಲದೇ ಪರದಾಡುವಂತಾಗಿದೆ. ವಿದ್ಯಾರ್ಥಿಗಳಿಗೆ ಕ್ಲಾಸ್ ಕಾರಿಡಾರ್, ಶೆಡ್ ನಿರ್ಮಾಣ ಮಾಡಿ ಶಿಕ್ಷಕರು ಪಾಠ ಹೇಳಲು ಮುಂದಾದ ಘಟನೆ ನಡೆದಿದೆ. ಶಿಕ್ಷಕರಿಗೂ ಸಹ ಯಾವುದೇ ಸೌಲಭ್ಯ ಇಲ್ಲದೇ ಪರದಾಡುವಂತಾಗಿದೆ.

ಸರ್ಕಾರ ಏನೆಲ್ಲಾ ಕಾನೂನುಗಳನ್ನು ತಂದಿದೆ ಎಷ್ಟೆಲ್ಲಾ ಶಾಲಾ ಕಾಲೇಜುಗಳನ್ನು ಅಭಿವೃದ್ಧಿಗೆ ತಂದಿವೆ ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳು ತಗಡಿನ ಷಡ್ ನಲ್ಲಿ ತರಗತಿಗೆ ಕೂತಿದ್ದಾರೆ. ಅದು ನಗರದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವಿದ್ಯಾರ್ಥಿಗಳು. ಸರ್ಕಾರದ ವಿವಿಧ ಅನುದಾನ ಪಡೆಯುವ ಮಹಾವಿದ್ಯಾಲಯ ಇಂದು ದನದ ಕೋಟ್ಟಿಗೆ ಯಾಗಿದೆ.

ಹೌದು, ಸರಕಾರ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸುತ್ತಿದೆ ಆದರೆ ಧಾರವಾಡದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಕ್ಕಳು ತಗಡಿನ ಷಡ್ ನಲ್ಲಿ, ಕಾಲೇಜಿನ ಕಾರಿಡಾರ್ ನಲ್ಲಿ ತರಗತಿಗೆ ಹಾಜರಾಗಿದ್ದಾರೆ. ಆದರೆ, ತರಗತಿ ಯಾಕೆ ಇಲ್ಲಾ ಎಂಬುದಕ್ಕೆ ಉತ್ತರ ಕಾಲೇಜಿನ ಮುಂದೆ ಈಗಾ ಹೊಸದಾಗಿ ಕಟ್ಟಡ ಕಟ್ಟಲ್ಪಡುತ್ತಿದೆ ಎಂಬುದು, ಹೌದು ಈ ಎಲ್ಲಾ ಸಮಸ್ಯೆಗೆ ಪರಿಹಾರ ಸೂಕ್ತ ಕಟ್ಟಡ ಬೇಕು ಅಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ತರಗತಿಗಳು ದೊರೆಯಬೇಕು ಅದಕ್ಕೆಲ್ಲ ಇಷ್ಟರಲ್ಲಿಯೇ ಸೂಕ್ತ ಪರಿಹಾರ ದೊರಕಲಿದೆ. ಆದರೆ ಈ ಕಾಲೇಜಿನಲ್ಲಿ ಇರುವ ಶೌಚಾಲಯದ ಸಮಸ್ಯೆ ಇಂದಾ ಹಿಡಿದು ಎಲ್ಲಾ ಸಮಸ್ಯೆಗಳು ಪರಿಹಾರವಾಗಬೇಕು ಎಂಬುದು ವಿದ್ಯಾರ್ಥಿಗಳ ಆಶಯ.

ಫ್ರೆಶ್ ನ್ಯೂಸ್

Latest Posts

Featured Videos