ಅಂಗಡಿಯಲ್ಲಿದ್ದ ಸಾಮಗ್ರಿ ಕಳವು

ಅಂಗಡಿಯಲ್ಲಿದ್ದ ಸಾಮಗ್ರಿ ಕಳವು

ಹುಬ್ಬಳ್ಳಿ,, ಡಿ. 06: ನಗರದ ಚೆನ್ನಪೇಟೆಯ ಕ್ರಾಸ್ ಬಳಿಯ ನಂದಿನಿ ಮಿಲ್ಕ್ ಸೆಂಟರ್‌ನ ಶೆಟ್ಟರ್ ಮುರಿದು ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ರಾಜನಗರದ ಮಹೇಶ್ವರಯ್ಯಾ ಗದಿಗೇಯ್ಯಾ ಚಿಕ್ಕಮಠ ಎಂಬುವವರ ಅಂಗಡಿಯಾಗಿದ್ದು ರಾತ್ರಿ ಅಂಗಡಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡದಿದೆ. ಅಂಗಡಿಯಲ್ಲಿನ 21 ಸಾವಿರ ನಗದು, 2 ಸಾಚ ಮೌಲ್ಯದ ಸಿಗರೇಟ್, 1500 ರೂಪಾಯಿ ಮೌಲ್ಯದ ಚಾಕೊಲೇಟ್ ಸೇರಿದಂತೆ ಒಟ್ಟು 24,500 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos