ತ್ವಚೆಯ ಕಾಂತಿಗೆ ಪರಂಗಿ ಹಣ್ಣು

ತ್ವಚೆಯ ಕಾಂತಿಗೆ ಪರಂಗಿ ಹಣ್ಣು

ಬೆಂಗಳೂರು, ಸೆ. 28: ತ್ವಚೆಯ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುವವರು ಎಂದರೆ ಅದು ಹೆಣ‍್ಣು ಮಕ್ಕಳು. ಹೌದು, ತ್ವಚೆಯ ಸೌಂದರ್ಯಕ್ಕಾಗಿ ಪರಂಗಿ ಹಣ‍್ಣು. ಈ ಪರಂಗಿ  ಹಣ್ಣಿನಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಪಪೈನ್ ಅನ್ನೋ ಅಂಶವಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಇದು ತುಂಬಾ ಸಹಕಾರಿ.

* ಒಂದು ತುಂಡು ಪಪ್ಪಾಯಿಯನ್ನು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಬೆಲ್ಲ ಮತ್ತು ಓಟ್ ಮೀಲ್ ಸೇರಿಸಿಕೊಳ್ಳಿ.

ಇದನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ಚರ್ಮವನ್ನು ಶುಚಿಗೊಳಿಸಿ ಕಾಂತಿ ಹೆಚ್ಚಿಸುತ್ತದೆ.

* ಅರ್ಧ ಬಟ್ಟಲು ಪಪ್ಪಾಯ ಹಣ್ಣನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಎರಡು ಚಮಚ ಹಾಲು ಹಾಗೂ ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ತಯಾರಿಸಿದ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಲೇಪಿಸಿ. ಹದಿನೈದು ನಿಮಿಷಗಳ ನಂತರ ಮುಖ ತೊಳೆಯಿರಿ ಇದರಿಂದ ನಿಮ್ಮ ಮುಖ ಕಾಂತಿಯುತವಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos