ಕಬ್ಬು ಬೆಳೆಯನ್ನು ಸುಟ್ಟು ಕಡಿಯಲು ಮುಂದಾದ ಕಾರ್ಖಾನೆ ಮಾಲೀಕರು

ಕಬ್ಬು ಬೆಳೆಯನ್ನು ಸುಟ್ಟು ಕಡಿಯಲು ಮುಂದಾದ ಕಾರ್ಖಾನೆ ಮಾಲೀಕರು

ಚಿಕ್ಕೋಡಿ, ಫೆ. 05: ಕಷ್ಟ ಪಟ್ಟು ಬೆಳೆದ ಕಬ್ಬು ಬೆಳೆಯನ್ನು ಇಂದು ಸಕ್ಕರೆ ಕಾರ್ಖಾನೆಗಳು ತಮ್ಮ ಲಾಭಕ್ಕಾಗಿ ಬೆಳೆದ ನಿಂತ ಕಬ್ಬು ಬೆಳೆಯನ್ನು ಸುಟ್ಟು ಕಡೆಯಲು ಮುಂದಾಗಿದ್ದು, ಇದರಿಂದ ಕಬ್ಬು ಬೆಳೆದ ರೈತನಿಗೆ ತೀವ್ರವಾಗಿ ಹಾನಿಯಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ತಮ್ಮ ಲಾಭಕ್ಕಾಗಿ ಕಬ್ಬು ಬೆಳೆಯನ್ನು ಸುಟ್ಟು ಕಡಿಯುತ್ತಿರುವುದರಂದ ರೈತರಿಗೆ ತೀರ್ವವಾಗಿ ನಷ್ಟ ಅನುಭವಿಸುವಂತಾಗಿದೆ. ಈ ಕಬ್ಬನ್ನು ಸುಟ್ಟು ಕಟಾವು ಮಾಡುವುದರಿಂದ ಕಬ್ಬು ಬಿಸಲಿಗೆ ನೀರು ಬಿಡಲು ಪ್ರಾರಂಭಿಸುತ್ತದೆ. ಇದರಿಂದ ಕಬ್ಬು ಬೆಳೆ ತೂಕ ಕಡಿಮೆ ಬರುವುದರಿಂದ ರೈತನಿಗೆ ಕಬ್ಬನ್ನು ಸುಟ್ಟು ಕಡಿಯುವುದರಿಂದ ತೀರ್ವ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾನೆ.

ಈ ರೀತಿ ಕಬ್ಬನ್ನು ಸುಟ್ಟು ಕಡಿಯುವುದರಿಂದ ಕಾರ್ಖಾನೆ ಮಾಲೀಕರಿಗೆ ಲಾಭದಾಯಕವಾಗಿರಬಹುದು ಹಾಗೂ ಇಂತಹ ಕೂಲಿ ಕೆಲಸಕ್ಕೆ ಕಾರ್ಮಿಕರು ಕಡಿಮೆ ಬಳಕೆಯಾಗಬಹುದು ಎನ್ನುವ ದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಯನ್ನು ಬಿಂಕಿ ಹಚ್ಚಿ ಸುಟ್ಟು ಕಡೆಯಲು ಮುಂದಾಗಿವೆ.

ಈ ರೀತಿ ಕಬ್ಬು ಕಟಾವು ಮಾಡುವುದರಿಂದ ಕಾರ್ಮಿಕರಿಗೆ ಸುಟ್ಟ ಬೂಧಿಯಿಂದ ಕಬ್ಬು ಕಟಾವು ಮಾಡುವಾಗ ಆ ಸುಟ್ಟ ಧೂಳಿನಿಂದ ರೈತರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದಕ್ಕಾಗಿ ಕಬ್ಬು ಬೆಳೆದ ರೈತರಿಗೆ ಇದರಿಂದ ಮೊಸವಾಗುತ್ತಿದ್ದು, ಇದರಿಂದ ರೈತ ಕಬ್ಬಿನ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos