ಅಂತಿಂಥ ಹಣ್ಣಲ್ಲ ಬಾಳೆಹಣ್ಣು

ಅಂತಿಂಥ ಹಣ್ಣಲ್ಲ ಬಾಳೆಹಣ್ಣು

ಬೆಂಗಳೂರು, ಜ.13 : ಹಣ್ಣುಗಳಲ್ಲೇ ಬಾಳೆಹಣ್ಣು ತುಂಬಾ ಶ್ರೇಷ್ಠ,ಈ ಹಣ್ಣು ತಿನ್ನುವುದಕ್ಕೂ ಕಷ್ಟವಾಗಲ್ಲ ಸಿಪ್ಪೆ ಸುಲಿದು ಬಾಯಿಗೆ ಇಟ್ತರಾಯಿತಷ್ಟೇ, ಇನ್ನು ನೀವು ಪ್ರತಿದಿನ ಬರಿ 2 ಬಾಳೆ ಹಣ್ಣು ತಿಂದರೆ ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭ ಇದೆ ಗೊತ್ತಾ ???ನೀವೇ ನೋಡಿನಿಮ್ಮ ದೇಹದ ರಕ್ತದೊತ್ತಡ ಹೆಚ್ಚಾಗಿದ್ರೆ,ಬಾಳೇಹಣ್ಣಿನಲ್ಲಿರುವ ಸುಮಾರು ೪೦೦ ಎಂ ಜಿ ಪೊಟಾಷಿಯಮ್ ನಿಮ್ಮ ದೇಹದ ರಕ್ತದೊತ್ತಡವನ್ನ ಸಾಮಾನ್ಯ ಸ್ತಿತಿಗೆ ತಂದುಬಿಡುತ್ತದೆ.

ನಿಮ್ಮ ತೂಕ ಜಾಸ್ತಿ ಇದ್ದರೆ ಪ್ರತಿದಿನ ಬಾಳೇಹಣ್ಣು ತಿಂದರೆ ಸಾಕು ನಿಮ್ಮ ದೇಹಕ್ಕೆ ಸಿಗಬೇಕಾದ ಪೌಷ್ಟಿಕಾಂಶಗಳು ಸಿಗುತ್ತದೆ ಹಾಗೆಯೇ ನೀವು ಸಣ್ಣ ಆಗುವುದಕ್ಕೂ ಸಹಕಾರಿ.

ಗ್ಯಾಸ್ಟ್ರಿಕ್ ಮತ್ತೆ ಎದೆ ಉರಿ ಇರುವವರು ಬಾಳೆಹಣ್ಣು ತಿನ್ನುವುದರಿಂದ ತುಂಬಾ ಲಾಭ ಇದೆ,ಹಾಗೇನೆ ಬೇಧಿ ಮತ್ತೆ ಅತಿಸಾರದಿಂದ ನರಳುತ್ತಿರುವವರಿಗೆ ಬಾಳೇಹಣ್ಣು ತುಂಬಾ ಒಳ್ಳೆಯದು.

ಈ ಹಣ್ಣಿನಲ್ಲಿ ನಾರಿನಂಶ ಜಾಸ್ತಿ ಇರೋದ್ರಿಂದ,ಒಂದೇ ಸಲಕ್ಕೆ ಎರಡು ಹಣ್ಣು ತಿಂದರೆ ಸಾಕು ತುಂಬ ಹೊತ್ತು ಹಸಿವಾಗಲ್ಲ. ಹಾಗೇನೆ ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿ ಮಾಡಿ,ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡೋ ಹಾಗೆ ಮಾಡುತ್ತೆ.

ದೇಹದ ಕಣಗಳು : ಗ್ಲುಕೋಸ್ ಹಿರಿಕೊಳ್ಳಕ್ಕೆ ಆಗಲ್ಲ, ಆಗ ಮೀದೊಜೀರಕ ಗ್ರಂಥಿ ಜಾಸ್ತಿ ಪ್ರಮಾಣದಲ್ಲಿ ಗ್ಲುಕೋಸ್ ಬಿಡುಗಡೆ ಮಾಡುತ್ತದೆ, ನಮ್ಮ ದೇಹದಲ್ಲಿ ಕೊಬ್ಬಿನಾಂಶ ಶೇಖರಣೆ ಆಗುತ್ತಿದೆಯೋ ಇಲ್ಲವೋ ಅನ್ನೋದು ಈ ಇನ್ಸುಲಿನ್ ಸರಿಯಾಗಿ ಕೆಲಸ ಮಾಡೋ ಹಾಗೆ ಬಾಳೇಹಣ್ಣು ಮಾಡುತ್ತೆ.

ಜೀರ್ಣಶಕ್ತಿ ಹೆಚ್ಚಾಗುತ್ತದೆ : ಈ ಬಾಳೆಹಣ್ಣು ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ, ಜೊತೆಗೆ ಹೊಟ್ಟೆ ಕುರುಳಿಗೆ ಯಾವ ರೀತಿಯ ತೊಂದರೆಯೂ ನೀಡಲ್ಲ, ಇದರಲ್ಲಿರೋ ಪಿಷ್ಟ ಹೊಟ್ಟೆಯಲ್ಲಿ ಜೀರ್ಣ ಆಗಲ್ಲ. ಬದಲಾಗಿ ದೊಡ್ಡ ಕರುಳಿನವರೆಗೂ ಹೋಗಿ ಆರೋಗ್ಯಕರ ಬ್ಯಾಕ್ಟೀರಿಯಾಗೆ ಪೌಷ್ಟಿಕಾಂಶ ಕೊಡುತ್ತದೆ.

ವಿಟಮಿನ್ ಕೊರತೆ ಬರಲ್ಲ : ದಿನ ಒಂದು ಬಾಳೇಹಣ್ಣು ತಿಂದರೆ ನಿಮ್ಮ ದೇಹಕ್ಕೆ ಬೇಕಿರೋ ಸುಮಾರು 20% ನಷ್ಟು ವಿಟಮಿನ್ ಬಿ6 ಸಿಗುತ್ತದೆ ಹಾಗು ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದಕ್ಕೆ ಹಾಗು ಆರೋಗ್ಯ ಕಣಗಳು ಹೊಸದಾಗಿ ಬೆಳೆಯುವುದಕ್ಕೆ ಸಹಾಯ ಮಾಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos