ಡಿಕೆಶಿ ಆಸ್ತಿ ನನ್ನ ಹೆಸರಿನಲ್ಲಿ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಡಿಕೆಶಿ ಆಸ್ತಿ ನನ್ನ ಹೆಸರಿನಲ್ಲಿ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು, ಸೆ. 18: ಒಬ್ಬರಲ್ಲ, ಇಬ್ಬರಲ್ಲ ಇಡಿ ಪಟ್ಟಿಯಲ್ಲಿ 184 ಜನ ಇದ್ದಾರಂತೆ. ಈ ಎಲ್ಲರಿಗೂ ಇಡಿ ನೋಟೀಸ್ ನೀಡಿದೆ. 184 ಜನರಿಗೆ ಇಡಿ ನೋಟಿಸ್ ನೀಡಿದೆ. ಅವರಲ್ಲಿ ನಾನು ಒಬ್ಬಳು ಅಷ್ಟೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಡಿಕೆಶಿ ಅವರು ನನ್ನನ್ನು ರಾಜಕೀಯವಾಗಿ ಬೆಳೆಸಿದವರು. ಅದನ್ನು ಬಿಟ್ಟು ಡಿಕೆಶಿ ಅವರ ಯಾವುದೇ ಆಸ್ತಿ ನನ್ನ ಹೆಸರಿನಲ್ಲಿ ಇಲ್ಲ. ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಇಡಿ ಅಧಿಕಾರಿಗಳಿಗೆ ಸೆ. 14ರಂದೇ ನನಗೆ ಸಮನ್ಸ್ ಬಂದಿತ್ತು. ಆದರೇ ವಿಚಾರಣೆಗೆ ಹಾಜರಾಗಿರಲಿಲ್ಲ. ಯಾವ ವಿಚಾರಕ್ಕೆ ಕೊಟ್ಟಿದ್ದಾರೋ ಎಂದು ನನಗೆ ಗೊತ್ತಿಲ್ಲ. ಆದರೇ ಇದೀಗ ಮತ್ತೆ ನೀಡಲಾಗಿದೆ. ಸೆಪ್ಟಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಿದ್ದಾರೆ ಎಂದು ಹೇಳಿದರು.

ಸೆಪ್ಟಂಬರ್ 19ರಂದು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ. ಅದಕ್ಕೂ ಮೊದಲು ಇಡಿ ಅಧಿಕಾರಿಗಳಲ್ಲಿ ನಮ್ಮ ಮನೆಯಲ್ಲಿಯೇ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos