ಕೊರೊನಾ ಸೋಂಕಿನ ಜೊತೆ ಈ ರೋಗ ಕಾಲಿಟ್ಟಿದೆ

ಕೊರೊನಾ ಸೋಂಕಿನ ಜೊತೆ ಈ ರೋಗ ಕಾಲಿಟ್ಟಿದೆ

ಬೆಂಗಳೂರು, ಮಾ. 10:  ದೇಶ ವಿದೇಶಗಳಲ್ಲಿ ಮರಣ ಮೃದಂಗವಾಡುತ್ತಿರು ಕೊರೊನಾ ಸೋಂಕಿನ ಜೊತೆಗೆ ಈಗ ಸಿಲಿಕಾನ ಸಿಟಿಗೆ ಕಾಲರಾ ರೋಗ ಕಾಲಿಡುತ್ತಿದೆ ಆದ್ದರಿಂದ ಸಿಲಿಕಾನ ಸಿಟಿಯಲ್ಲಿ ಬೀದಿಬದಿ ಮಾರಾಟ ಮಾಡುವಂತಹ ಆಹಾರ ಸೇವಿಬಾರದೆಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶ ಹೊರಡಿಸಿದೆ.

ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳ ಮಾರಟವನ್ನು ಕಾಲರಾ ರೋಗದ ಹೆಚ್ಚಾದ ಪ್ರಕರಣಗಳ ಹಿನ್ನಲೆಯಲ್ಲಿ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಹೀಗಾಗಿ ಸಿಲಿಕಾನ್ ಸಿಟಿಯ ಜನರು ಬೀದಿ ಬದಿಯ ಊಟ ಮಾಡೋ ಮುನ್ನಾ ಎಚ್ಚರ ವಹಿಸೋದು ಮರೆಯಬೇಡಿ.

ಈ ಕುರಿತಂತೆ ಆದೇಶ ಹೊರಡಿಸಿರುವ ಬಿಬಿಎಂಪಿಯ ಪಶ್ಚಿಮ ವಲಯದ ಆರೋಗ್ಯಾಧಿಕಾರಿಗಳು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ ರೋಗವು ದಾಖಲಾಗಿರುವ ಹಲವು ಪ್ರಕರಣಗಳು ಕಂಡು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಮೇಯರ್, ಆಯುಕ್ತರು, ಸಾರ್ವಜನಿಕ ಆರೋಗ್ಯಾಧಿಕಾರಿಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪಾಲಿಕ ವ್ಯಾಪ್ತಿಯ ಬೀದಿ ಬದಿಗಳಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲೆಡೆ ಕಾಲರಾ ರೋಗದ ಮುಂಜಾಗ್ರತಾ ಕ್ರಮವಾಗಿ ಬೀದಿ ಬದಿಯ ತೆರೆದಿಟ್ಟ ಆಹಾರ ಪದಾರ್ಥಗಳ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ನಿಯಮವನ್ನು ತಪ್ಪಿದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos