ಪತ್ತೆಯಾದ ಮುತ್ತು

ಪತ್ತೆಯಾದ ಮುತ್ತು

ಅಬುಧಾಬಿ, ಅ. 21: ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ 8 ಸಾವಿರ ವರ್ಶಗಳ  ಹಿಂದಿನ ಮುತ್ತು ಎಂದು ಅಬುಧಾಬಿಯ ಪುರಾತತ್ವ ಇಲಾಖೆ ಹೇಳಿದೆ.

ಈ ಮುತ್ತು ಅಬುಧಾಬಿಯ ಮರಾವಾ ದ್ವೀಪದಲ್ಲಿ ಉತ್ಖನನ ಮಾಡುವಾಗ ಸಿಕ್ಕಿದ ಕೋಣೆಯೊಂದರ ಒಳಗೆ ಈ ಮುತ್ತು ಕಂಡು ಬಂದಿದೆ. ಮುತ್ತನ್ನು ಪರಿಶೀಲನೆ ಮಾಡಿದ ಪುರಾತತ್ವ ಇಲಾಖೆ ಅಧಿಕಾರಿಗಳು ಇದು ನವಶಿಲಾಯುಗ ಅಂದರೆ ಸುಮಾರು ಕ್ರಿ.ಪೂ 5800 – 5600 ಕಾಲದ್ದು ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಅಬುಧಾಬಿಯ ಇಲಾಖೆ ಅಧ್ಯಕ್ಷ ಮೊಹಮ್ಮದ್ ಆಲ್ ಮುಬಾರಕ್, ಅಬುಧಾಬಿಯಲ್ಲಿ ವಿಶ್ವದ ಅತ್ಯಂತ ಹಳೆಯ ಮುತ್ತುಗಳ ಆವಿಷ್ಕಾರ ನಮ್ಮ ಇತ್ತೀಚಿನ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವು ಆಳವಾದ ಬೇರುಗಳನ್ನು ಹೊಂದಿದೆ. ಈ ಹಿಂದೆ ಮರಾವಾ ತಾಣದಲ್ಲಿ ಉತ್ಖನನ ಮಾಡುವಾಗ ಪಿಂಗಾಣಿ, ಶೆಲ್ ಮತ್ತು ಕಲ್ಲಿನಿಂದ ಮಾಡಿದ ಮಣಿಗಳು, ಬಾಣಗಳು ಸಿಕ್ಕಿದ್ದವು ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos