ಕುರಿಗಾಹಿ ಮಹಿಳೆ ಸಾವು

ಕುರಿಗಾಹಿ ಮಹಿಳೆ ಸಾವು

ಕಾರವಾರ, ನ. 22 : ಕಬ್ಬು ತುಂಬಿದ ಲಾರಿ ಹಾಯ್ದು ಕುರಿಗಾಹಿ ಮಹಿಳೆ ಸೇರಿ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗೋಕಾಕ್ ತಾಲೂಕಿನ ಹಿರೇಹಟ್ಟಿ ಗ್ರಾಮದ ನಿವಾಸಿ ಶೋಭಾ ಯಲ್ಲಪ್ಪ (26) ಸ್ಥಳದಲ್ಲೇ ಮೃತಪಟ್ಟ ಮಹಿಳೆ.
ಕಲಘಟಗಿ ಹಳಿಯಾಳ ರಸ್ತೆಯ ಜನಗಾ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಅಲ್ಲದೆ ಲಾರಿಯ ರಭಸಕ್ಕೆ 20ಕ್ಕೂಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಕುರಿಗಳನ್ನು ಎಳೆದುಕೊಂಡೇ ಸುಮಾರು ದೂರ ಲಾರಿ ಸಾಗಿದೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಕ್ಲೀನರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಲಾರಿ ಅತೀ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಬಿ.ಎಸ್.ಲೋಕಾಪುರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos