ಕೆರೆ ಕಟ್ಟೆ ಒಡೆದು 600ಕ್ಕು ಹೆಚ್ಚು ಮನೆಗಳಿಗೆ ನುಗ್ಗಿದ ಕೆರೆ ನೀರು

ಕೆರೆ ಕಟ್ಟೆ ಒಡೆದು 600ಕ್ಕು ಹೆಚ್ಚು ಮನೆಗಳಿಗೆ ನುಗ್ಗಿದ ಕೆರೆ ನೀರು

ಹುಳಿಮಾವು, ನ. 25: ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆರೆ ಕಟ್ಟೆ ಒಡೆದಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿ ಜನ ಬೀದಿಗೆ ಬಂದಿರುವ  ಘಟನೆ ನಡೆದಿದೆ.

ಹೀಗೆ ನದಿಯಂತೆ ಹರಿಯುತ್ತಿರಯುವ ಕೆರೆಯ ನೀರು, ಮನೆಗಳು ರಸ್ತೆಗಳ ನೀರಿನಲ್ಲಿ ನಿಂತಿರುವ ಕಾರು, ಬೈಕ್ಗಳು, ಮನೆಗಳಿಗೆ ನುಗ್ಗಿರುವ ನೀರು ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಹುಳಿಮಾವು ಗ್ರಾಮದ ಕೆರೆಯಲ್ಲಿ,

ಇನ್ನು ಕಳೆದ ಒಂದು ತಿಂಗಳಿಂದ ನಿರಂತರವಾಗಿ ಮಳೆ ಬಂದ ಹಿನ್ನಲೆ ಬೆಂಗಳೂರಿನ ಬಹುತೆಕ ಕೆರೆಗಳು ತುಂಬಿದ್ದು, ಅದೇ ರೀತಿ ಹುಳಿಮಾವು ಕೆರೆಯು ಸಹ ತುಂಬಿದ್ದು, ಬಿಡಿಎ ಅಧಿಕಾರಿಗಳು ಕೆರೆಯ ಅಭಿವೃದ್ಧಿ ಪಡೆಸಲು ಮುಂದಾಗಿದ್ದರು. ಅದರಂತೆ ಇಂದು ಕೆರೆಯ ಅಭಿವೃದ್ಧಿ ಮಾಡಲು ಗುತ್ತಿಗೆದಾರ ಜೆಸಿಬಿ ಮುಖಾಂತರ ಕಟ್ಟೆಯ ಮಣ್ಣನ್ನು ತೆಗೆದಿದ್ದಾನೆ, ಕೆರೆಯಲ್ಲಿ ನೀರು ಹೆಚ್ಚಾದ ಹಿನ್ನಲೆ ಕಟ್ಟೆ ಒಡೆದು ಏಕಾಏಕಿ ನೀರು ಮನೆಗಳಿಗೆ ನುಗ್ಗಿದ್ದು ನೂರಾರು ಮನೆಗಳು, ಕಾರು, ಬೈಕ್ ಗಳು ನೀರಿನಲ್ಲಿ ಮುಳುಗಿ ಹೋಗಿದೆ. ಕೆರೆಯ ನೀರು ರಾಜ ಕಾಲುವೇಯ ಮುಖಾಂತರ ಮಡಿವಾಳ ಕೆರೆ ಸೇರಲಿದ್ದು, ಸುಮಾರು ಐದು ಕಿಲೋಮಿಟರ್ಗಳಷ್ಟು ಉದ್ದದ ಕಾಲುವೆ ಇದಾಗಿದೆ.

ಇನ್ನು ಸುಮಾರು 12-30 ರ ಸಮಯದಲ್ಲಿ ಕೆರೆಯ ಕಟ್ಟೆ ಒಡೆದಿದ್ದು, ಕೆರೆಯಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿತ್ತು, ನಂತರ ನೀರಿನ ರಭಸ ಹೆಚ್ಚಾಗಿ ನೀರು ಮನೆಗಳಿಗೆ ನುಗ್ಗಿದೆ, ಮನೆಗಳಲ್ಲಿದ್ದ ಜನರನ್ನು ಪೊಲೀಸರು ಹಾಗೂ ಸ್ಥಳೀಯ ಯುವಕರು ಕೆರೆಯ ಕಟ್ಟೆ ಒಡೆದಿದೆ ಬೇಗ ಮನೆಗಳಿಂದ ಹೊರಗೆ ಬನ್ನಿ ಎಂದು ಕೂಗಾಡಿದ್ದು, ಮನೆಗಳಲ್ಲಿ ವಾಸ ಮಾಡುತ್ತಿದ್ದ ಜನ ಹೊರ ಬಂದು ತಮ್ಮ ಜೀವವನ್ನು ಉಳಿಸಿ ಕೊಂಡಿದ್ದಾರೆ, ಇನ್ನು ಮನೆಗಳಿಂದ ದಿನಬಳಕೆಯ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ದೃಶ್ಯಗಳು ಸಹ ಕಂಡು ಬಂದವು.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮನೆಗಲ್ಲಿ ಇದ್ದ ಜನರನ್ನು ಸ್ಥಳಾಂತರ ಗೋಳಿಸಿ ಕೆರೆಯ ಕಟ್ಟೆ ಒಡೆದ ಸ್ಥಳದಲ್ಲಿ ಜೆಸಿಬಿಗಳು, ಲಾರಿಗಳ ಮುಖಾಂತರ ಮಣ್ಣು ಕಲ್ಲುಗಳನ್ನು ತಂದು ತಾತ್ಕಾಲಿಕ ಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನು ಬಿಡಿಎ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ ಮೇಲೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos