ಸ್ವಚ್ಚತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ

ಸ್ವಚ್ಚತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ

ಪಾವಗಡ: ಪಟ್ಟಣದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ವೈದ್ಯಾದಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಪುರಸಭೆ ಸದಸ್ಯ ಸುದೇಶ್ ಬಾಬು ಹೇಳಿದರು.
ಪಾವಗಡ ಪುರಸಭಾ ಕಾರ್ಯಾಲಯದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಮಾತನಾಡಿ ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಊರನ್ನು ಸ್ವಚ್ಛವಾಗಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು, ಪ್ರತಿ ದಿನವೂ ಪಟ್ಟಣದ ಸ್ವಚ್ಛತೆ ಮಾಡಿ, ಕಸ ಕಡ್ಡಿಯನ್ನು ವಿಲೇವಾರಿ ಮಾಡುತ್ತಾರೆಂದು ಶ್ಲಾಘಿಸಿದರು.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಶೋಭ ಅವರಿಂದ ಊಟದ ಕೊಠಡಿ ಶೌಚಾಲಯ ಹಾಗೂ ಸ್ಥಾನದ ಗೃಹ ಉದ್ಘಾಟನೆ ನೆರವೇರಿಸಿದರು. ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪೌರಕಾರ್ಮಿಕರಿಗೆ ಹೂವಿನ ಸೂರಿಮಳೆಗೈಯುವ ಮೂಲಕ ವಿಭಿನ್ನವಾಗಿ ಗೌರವ ಸಲ್ಲಿಸಿದರು
ಕಾಯಂ ಪೌರ ಕಾರ್ಮಿಕರಿಗೆ ವಿಶೇಷ ಭತ್ತೆಯ ಚೆಕ್ ವಿತರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos