ಕೇಂದ್ರದ್ದು ಬಾಂಬೆ ಮಠಾಯಿ ಬಜೆಟ್: ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ

ಕೇಂದ್ರದ್ದು ಬಾಂಬೆ ಮಠಾಯಿ ಬಜೆಟ್: ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ

ಬೆಂಗಳೂರು: ಮೋದಿಯವರು ಚುನಾವಣಾ ಬಜೆಟ್ ನೀಡಿದ್ದಾರೆ. ಬಜೆಟ್
ನ್ನು ಯಾರು ತಯಾರಿಸಿದ್ದಾರೋ ಗೊತ್ತಿಲ್ಲ. ಆರೆಸ್ಸೆಸ್‍, ಬಿಜೆಪಿ ಕಚೇರಿಯಲ್ಲಿ ಬಜೆಟ್ ಪ್ರತಿ ತಯಾರಿಸಿರಬಹುದು
ಎಂದು ಕೇಂದ್ರ ಸರಕಾರದ ಬಜೆಟ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಗುಡುಗಿದ್ದಾರೆ.

ಇಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿದಾಗ ಬಿಜೆಪಿ ನಾಯಕರು ಅದನ್ನು ಲಾಲಿಪಪ್ ಎಂದರು. ಆದರೆ ಇಂದು 6 ಸಾವಿರ ಬಗ್ಗೆ ಅವರ ಅಭಿಪ್ರಾಯವೇನು? ಬಜೆಟ್‍ನಲ್ಲಿ ತಾತ್ಕಾಲಿಕ ಖುಷಿ ಆದ್ರು ಸಿಗುತ್ತೇ ಎಂಬ ಆಸೆ ಇತ್ತು. ಆದರೆ ನನ್ನ ಮೇಲೆ ಹಾಕಿದ ಒತ್ತಡವೂ ವ್ಯಕ್ತವಾಗಿದೆ. ಏಕೆಂದರೆ ನಗರ ಉಪನಗರ ರೈಲ್ವೇಗೆ ಒಪ್ಪಿಗೆ ಸಿಗುತ್ತೇ ಎಂಬ ಆಶ್ವಾಸನೆ ನೀಡಿದ್ದರು. ಆದರೆ ಅದಕ್ಕೂ ಅನುಮತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಕೇಂದ್ರ ಬಜೆಟ್
ನ್ನು ಅವಲಂಭಿಸಿಲ್ಲ. ಕೇಂದ್ರದ ಬಜೆಟ್‍ ನಲ್ಲಿ ಯಾವುದೇ ರೀತಿಯ ಸ್ಪಷ್ಟತೆಯಿಲ್ಲ. ಮೋದಿಯವರ ಕಾರ್ಯಕ್ರಮ
ಕಾಟನ್‍ ಕ್ಯಾಂಡಿ. ಅಧಿಕಾರಿಗಳು ಈ ಬಜೆಟ್ ಸಿದ್ಧಪಡಿಸಿಲ್ಲ. ಆರೆಸ್ಸೆಸ್‍, ಬಿಜೆಪಿಯ ಕಚೇರಿಯಲ್ಲಿ
ಕುಳಿತು ಬಜೆಟ್‍ ತಯಾರಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕೇಂದ್ರ ಕಳೆದ 5 ಬಜೆಟ್‍ಗಳು ಕೂಡ ಸಾರ್ವಜನಿಕ ನಿರೀಕ್ಷೆಗೆ ಅನುಗುಣವಾಗಿ ಇರಲಿಲ್ಲ. ಈ ಬಾರಿ ಮುಂದಿನ ಚುನಾವಣೆಯಲ್ಲಿ ಮತ ಪಡೆಯಲಾದ್ರು ಜನರಿಗೆ ತಾತ್ಕಾಲಿಕ ಖುಷಿ ನೀಡವ ಯೋಜನೆ ಬರುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಬಜೆಟ್ ಹಣಕಾಸು ಇಲಾಖೆ ಅವರು ಮಾಡಿದ್ದಾರೋ ಅಥವಾ ಆರ್ ಎಸ್‍ಎಸ್, ಬಿಜೆಪಿ ಕೇಂದ್ರ ಕಚೇರಿ ಅವರು ಮಾಡಿದಂತೆ ಇದೆ ಎಂದರು.

ಕಳೆದ 5 ವರ್ಷಗಳಿಂದ ಆದಾಯ ಮಿತಿ ಹೆಚ್ಚಳ ಆಗಿರಲಿಲ್ಲ. ಅದು ಈ ವರ್ಷ ಮಾಡಿದ್ದಾರೆ ಅಷ್ಟೇ ಎಂದರು. ಅಲ್ಲದೇ ರೈತರಿಗೆ 6 ಸಾವಿರ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎಕರೆಗೆ 1,200 ರೂ.ಬರುತ್ತೆ, ಇದು ರೈತರಿಗೆ ತೀರಾ ಕಡಿಮೆ. ಆರು ಸಾವಿರದಿಂದ 75 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಅದರಲ್ಲಿ ಕರ್ನಾಟಕ ರೈತರಿಗೆ ಸುಮಾರು 3,579 ಕೋಟಿ ಲಾಭ ಆಗಬಹುದು ಎಂದು ಅಭಿಪ್ರಾಯ ಪಟ್ಟರು.

ರೈತ ಮುಖಂಡರು ಹಾಗೂ ಆರ್ಥಿಕ ತಜ್ಞರು ಬಜೆಟ್ ಸರಿ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ರೈತನಿಗೆ 48
ಸಾವಿರ ಕೋಟಿ ರೂ. ಸಾಲಮನ್ನಾ ಮಾಡುತ್ತಿದ್ದೇವೆ. ಇದರಿಂದ 44
ಲಕ್ಷ ರೈತರಿಗೆ ಸಾಲಮನ್ನಾ ಆಗುತ್ತಿದೆ. ಆದರೆ ರೈತರಿಗೆ 2%
ಬಡ್ಡಿ ವಿನಾಯ್ತಿ ಎಂದು ಕೇಂದ್ರ ಕ್ರಮ ಬರಿ ಬೋಗಸ್ ಅಷ್ಟೇ. ನಮ್ಮದು ಲಾಲಿ ಪಪ್ ಅಂದರೆ ಮೋದಿ ಬಜೆಟ್ ಬೊಂಬೆ ಮಿಠಾಯಿ ಬಜೆಟ್ ಎನ್ನಬಹುದಾ? ಎಂದು ಟಾಂಗ್ ಕೊಟ್ಟರು. ಅಲ್ಲದೇ 11
ಸಾವಿರ ಕೋಟಿ ರೂ. ಮೊತ್ತದಲ್ಲಿ ರೈತರಿಗೆ ವಿದ್ಯುತ್ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಆದರೆ ಹಾಲಿನ ಸಬ್ಸಿಡಿ
1,200 ಕೋಟಿ ರೂ. ನೀಡುತ್ತಿದ್ದೆ. ಇದನ್ನ ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಬರಗಾಲ ಇದ್ದರು ನಮ್ಮ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos