ಕಂಪ್ಯೂಟರ್ ಶಿಕ್ಷಣದೊಂದಿಗೆ ಸತ್ಪ್ರಜೆಗಳಾಗಲು ಕರೆ

ಕಂಪ್ಯೂಟರ್ ಶಿಕ್ಷಣದೊಂದಿಗೆ ಸತ್ಪ್ರಜೆಗಳಾಗಲು ಕರೆ

ಚಾಮರಾಜನಗರ, ಡಿ. 21: ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಮೊಬೈಲ್ ಮತ್ತು ಇಂಟರ್‌ನೆಟ್ ಚಟಕ್ಕೆ ಈಡಾಗದೇ ಪಠ್ಯ ಪುಸ್ತಕಗಳ ಅಧ್ಯಯನದ ಜತೆಗೆ ಉತ್ತಮ ಕಂಪ್ಯೂಟರ್ ಶಿಕ್ಷಣ ಪಡೆದು ಜ್ಞಾನಿಗಳಾಗಿ ಹುಟ್ಟಿದ ಗ್ರಾಮ, ಸಮಾಜ ಹಾಗೂ ನಾಡಿನ  ಭವಿಷ್ಯದ ಸತ್ಪ್ರಜೆಗಳಾಗುವಂತೆ ಡಿವೈಎಸ್‌ಪಿ ಮೋಹನ್.ಜೆ. ಕರೆನೀಡಿದರು.

ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯಲ್ಲಿ ಡಿಎಂ ಚಾರಿಟಬಲ್ ಟ್ರಸ್ಟ್ವತಿಯಿಂದ ಏರ್ಪಡಿಸಿದ್ದ ಬಡ ವಿದ್ಯಾವಂತ ನಿರೂದ್ಯೋಗಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಭವಿಷ್ಯದ ಜೀವನ ಸುಗಮವಾಗಲಿದೆ ಎಂದ ಅವರು ವಿದ್ಯಾರ್ಥಿ ಜೀವನದಲ್ಲಿ ದುಷ್ಚಟಗಳಿಗೆ ದಾಸರಾಗದೆ ಓದಿನ ಕಡೆ ನಿಗಾವಹಿಸಿ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಅನಕ್ಷರಸ್ಥ ತಂದೆ ತಾಯಿಗಳು ನಮ್ಮ ಮಕ್ಕಳು ವಿದ್ಯಾವಂತರಾಗಿ ಹುಟ್ಟಿದೂರು ಮತ್ತು ಸಮಾಜಕ್ಕೆ ಒಳಿತು ಮಾಡುವ ಮಕ್ಕಳಾಗಲೆಂದು ಕಾಣುವ ಕನಸು ನನಸು ಮಾಡುವ ಮಾಧರಿ ಮಕ್ಕಳಾಗಿ ಎಂದು ಮನವರಿಕೆ ಮಾಡಿಕೊಟ್ಟರು.

ಇಂದಿನ ಕಾಲಮಾನದಲ್ಲಿ ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯ, ಉಚಿತ ಕಂಪ್ಯೂಟರ್ ತರಬೇತಿ ನೀಡಿರುವುದಕ್ಕೆ ಸಂಸ್ಥೆಯನ್ನು ಶ್ಲಾಘಿಸಿದ ಮೋಹನ್‌ರವರು ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ವಿದ್ಯಾರ್ಥಿಯಾಗುವುದರ ಜೊತೆಗೆ ಉತ್ತಮ ನಾಗರೀಕರಾಗಿ ಎಂದರು.

ಪೊಲೀಸ್ ಇಲಾಖೆ ಆಚರಿಸುವ ಅಪರಾಧ ತಡೆ ಮಾಸ ಕೆವಲ ಪೊಲೀಸ್ ಇಲಾಖೆಗೆ ಸೀಮಿತವಲ್ಲ. ಇದು ಒಂದು ತಿಂಗಳಿಗೆ ಸೀಮಿತವಾಗದೆ, ಪ್ರತಿದಿನ ಅಪರಾಧ ತಡೆಯಲು ಪ್ರತಿಯೊಬ್ಬ ನಾಗರೀಕರೂ ಇಲಾಖೆಯೊಂದಿಗೆ ಸಹಕರಿಸಿ ಅಪರಾಧ ಪ್ರಕರಣಗಳನ್ನು ತಡೆಯಲು ಸಾರ್ವಜನಿಕರ ಪಾತ್ರ ಅತಿ ಮುಖ್ಯ ಎಂದು ತಿಳಿಸಿದರು. ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕು ಎಲ್ಲವನ್ನೂ ಪೊಲೀಸರೇ ಮಾಡಬೇಕೆಂದರೆ ಸಾದ್ಯವಿಲ್ಲ ಎಂದ ಮೋಹನ್‌ರವರು ಮಹಿಳೆಯರು ಸಾಂಸ್ಕೃತಿಕ ಸಭೆ, ಸಮಾರಂಭ ಹಾಗೂ ಶುಭ ಕಾರ್ಯಕ್ರಮಗಳಿಗೆ ಹೋಗುವಾಗ ಮೈತುಂಬಾ ವಡವೆ ಧರಿಸುವಷ್ಟೇ ಮುತುವರ್ಜಿ ತಮ್ಮ ಮೇಲಿನ ವಡವೆಗಳನ್ನು ಸರಗಳ್ಳರಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಮರೆಯಬಾರದೆಂದು ಮನವರಿಕೆ ಮಾಡಿಕೊಟ್ಟರು.

ಪ್ರತಿಯೊಬ್ಬರೂ ತಮ್ಮ ಮನೆಗಳ ಡೋರ್ ಲಾಕ್ ಮಡುವಂತೆ ತಿಳಿಸಿದ ಡಿವೈಎಸ್‌ಪಿ ಮೋಹನ್ ಮನೆಯಿಂದ ಎರಡು ಮೂರು ದಿನಗಳ ಕಲ ಹೊರಗೆ ಹೋಗುವಾಗ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದರೆ ಮನೆಗಳ್ಳತನ ಪ್ರಕರಣಗಳನ್ನು ತಡೆಯಲು ಸಾದ್ಯವಾಗುತ್ತದೆ ಎಂದರು. ಯಾವುದೇ ಗ್ರಾಮಗಳಿಗೆ ಅಪರಿಚಿತರು ಬಂದರೆ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿ ಮುಂದಾಗುವ ಅನಾಹುತಗಳನ್ನು ತಡೆಯಲು ಸಹಕರಿಸುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಉದ್ಯಮಿ ನಾಗೇಶ್ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos