ಸಾಮಾನ್ಯ ಜನರ ಆರ್ಥಿಕ ಹೊಂದಾಣಿಕೆ ಲೆಕ್ಕಾಚಾರ ತಲೆಕೆಳಗೆ!

ಸಾಮಾನ್ಯ ಜನರ ಆರ್ಥಿಕ ಹೊಂದಾಣಿಕೆ ಲೆಕ್ಕಾಚಾರ ತಲೆಕೆಳಗೆ!

ಕೋಲಾರ : ನಮ್ಮ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ನೆಡೆಸುವುದು ತುಂಬಾ ಕಷ್ಟಕರವಾಗಿದೆ. ಇದರಿಂದ ನಿರಂತರವಾಗಿ ಏರುತ್ತಿರುವ ನಿತ್ಯ ವಸ್ತುಗಳ ಬೆಲೆ ಸಾಮಾನ್ಯ ಜನರ ಆರ್ಥಿಕ ಹೊಂದಾಣಿಕೆಯ ಲೆಕ್ಕಾಚಾರವನ್ನು ತಲೆಕೆಳಗೂ ಮಾಡುತ್ತಿದೆ. ಇದರ ಜೊತೆಗೆ ಕೃಷಿ ವಲಯದಲ್ಲಿಯೂ ಈ ತಲೆಕೆಳಗೂ ಆಟ ಪರಿಣಾಮ ಬೀರುತ್ತಿದೆ. ಈ ಪರಿಣಾಮದಿಂದಾಗಿ ಕೃಷಿ ಎಂದರೆ ತಲೆನೋವು ಎಂಬಂತಾಗಿದೆ.
ಇದು ಮಳೆಯ ವಿಷಯವಾದರೆ ಬಂದ ಮಳೆಗೆ ಏನೂ ಒಂದಿಷ್ಟು ಬಿತ್ತನೆ ಮಾಡಿಕೊಂಡರು ಕಳೆ ತೆಗೆಯುವ ಕೆಲಸದಿಂದ ಹಿಡಿದು ಕೊಯ್ಲಿನವರೆಗೆ ಕೃಷಿ ಕಾರ್ಮಿಕರ ಕೊರತೆ ಕಾಡುತ್ತದೆ. ಹಿಂದಿನಂತೆ ಮನೆಗಳಲ್ಲಿ ಸ್ವಂತ ಕೆಲಸಗಾರರು ಇರುವುದು ಅಪರೂಪವಾಗುತ್ತಿರುವುದು ಈ ಸಮಸ್ಯೆಗೆ ಇರುವ ಇದೊಂದು ಆಯಾಮ.
ಬೇಸಾಯದ ಕೆಲಸಕ್ಕಾಗಿ ಬರುವ ಕೂಲಿಕಾರರ ಬೇಡಿಕೆಗಳು ಬದಲಾಗಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಕೂಲಿಯ ದರವು ಏರುತ್ತಿದೆ. ಫಸಲು ಬಂದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದು ಅನುಮಾನ. ಆದರೂ ರೈತರು ಲಾಭನಷ್ಟಗಳು ತೂಗುಯ್ಯಾಲೆಯಲ್ಲಿಯೇ ಬೇಸಾಯವನ್ನು ಮುಂದುವರಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಈ ವರ್ಷ ಪ್ರಾರಂಭಿಕ ಮಳೆಗಳು ತೆಳುವಾಗಿ ಬಿದ್ದವು, ತಕ್ಷಣಕ್ಕೆ ಬಿತ್ತುವ ಅನುಕುಲವಿದ್ದವರು ಬಿತ್ತನೆ ಮಾಡಿದರೂ ಕೊಂಚ ಒಣಗಿದರೂ ತಡವಾಗಿ ಬಂದ ನೆನೆ ಮಳೆಗೆ ಪಚ್ಚೆಪೈರು ಜೀವಂತಿಕೆಯನ್ನು ಪಡೆದವು. ಅದರಲ್ಲಿ ರಾಗಿ ಬೆಳೆ ಪ್ರಮುಖವಾದುದು, ಹಿಂದಿನ ಬಿತ್ತನೆಗಳು ಮೊಳಕೆ ಹಸಿಗಟ್ಟುವ ವೇಳೆಗೆ ಮಳೆಯ ಕೊರತೆಯಿಂದಾಗಿ ಬಾಡಿಕೊಂಡವು, ಕಳೆದ ವಾರ ಸುರಿದಷ್ಟು ಮಳೆಗೆ ಜೀವ ಪಡೆದುಕೊಂಡಿವೆ.

ಫ್ರೆಶ್ ನ್ಯೂಸ್

Latest Posts

Featured Videos