ಮುಂದಿನ ಚುನಾವಣೆಗೆ ಉಪಚುನಾವಣೆ ಮಾರ್ಗಸೂಚಿ

ಮುಂದಿನ ಚುನಾವಣೆಗೆ ಉಪಚುನಾವಣೆ ಮಾರ್ಗಸೂಚಿ

ಶಿರಾ: ಮುಂದಿನ ಸಾರ್ವತ್ರಿಕ ಚುನಾವಣೆಗೆ ಈ ಉಪಚುನಾವಣೆ ಮಾರ್ಗಸೂಚಿಯಾಗಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ನುಡಿದರು.ಉಪಚುನಾವಣೆ ಮೂಲಕ ಇತರೆ ಪಕ್ಷಗಳಿಗೆ ಶಿರಾ ಮೇಲೆ ದಿಢೀರ್ ಪ್ರೀತಿ ಉಕ್ಕಿಬಂದಿದ್ದು, ನೀರಾವರಿ, ಅಭಿವೃದ್ಧಿ ಕೆಲಸದ ನೆಪ ಹೇಳಿಕೊಂಡು ಕ್ಷೇತ್ರದಲ್ಲಿ ತಿರುಗಾಟ ನಡೆಸಿದ್ದಾರೆ. ನಾನು ೨೦೧೮ರ ಚುನಾವಣೆಯಲ್ಲಿ ಸೋತಿದ್ದರೂ ಸುಮ್ಮನೇ ಕುಳಿತಿಲ್ಲ. ಕಳೆದ ಎರಡೂವರೆ ವರ್ಷದಲ್ಲಿ ಬಿಜೆಪಿ ನಡೆಸಿರುವ ಲೂಟಿತನವನ್ನು ಬಿಚ್ಚಿಡುತ್ತೇನೆ. ಈಗ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿರುವವರ ಹಿನ್ನೆಲೆ ನನಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರ ಬಂಡವಾಳವನ್ನೂ ಬಯಲು ಮಾಡುತ್ತೇನೆ ಎಂದು ಗುಡುಗಿದರು.

ನನ್ನ ಅಧಿಕಾರ ಅವಧಿಯಲ್ಲಿ ೧೬೦ ಕೋಟಿ ವೆಚ್ಚದಲ್ಲಿ ಶಿರಾ ತಾಲ್ಲೂಕಿನ ಹಲವೆಡೆ ಸುಮಾರು ೧೨೦ ಬ್ಯಾರೇಜ್, ಪಿಕಪ್ ಕಟ್ಟಿಸಿದ್ದೇನೆ. ನಾನೇನು ದಡ್ಡನಲ್ಲ. ಭದ್ರಾ ಮೇಲ್ದಂಡೆ ಯೋಜನೆ ಗಮನದಲ್ಲಿಟ್ಟುಕೊಂಡೇ ಇವುಗಳನ್ನು ನಿರ್ಮಿಸಿದ್ದೇನೆ. ಎಲ್ಲ ಬ್ಯಾರೇಜ್ ಪಿಕಪ್‌ಗಳಲ್ಲಿ ನೀರು ನಿಂತು, ಅಂತರ್ಜಲ ಅಭಿವೃದ್ಧಿಯಾಗಲಿದೆ. ಏನೇ ಆಗಲಿ ಹಿಡಿದ ಕಾರ್ಯ ಸಾಧಿಸುವುದೇ ನನ್ನ ಗುರಿ ಮತ್ತು ಛಲ.

ತಮ್ಮ ಮಾತಿನಲ್ಲಿ ಕಾರ್ಯಕರ್ತರ ಅಸಮಧಾನಕ್ಕೆ ಪರಿಹಾರ ಸೂಚಿಸಿದ ಟಿಬಿಜೆ, ಇನ್ನು ಮುಂದೆ ಎಷ್ಟೆ ಹಿರಿಯ ಕಾರ್ಯಕರ್ತ ಆಗಿರಲಿ, ಬೂತ್ ಕಮಿಟಿ ಸದಸ್ಯರಾಗುವುದು ಅನಿವಾರ್ಯವಾಗಲಿದೆ. ಯಾವುದೇ ಸಮಸ್ಯೆ ಬೂತ್ ಕಮಿಟಿ ಮೂಲಕ ಬಂದಲ್ಲಿ ಅದ್ಯತೆ ಮೇರೆಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೇ ಬರುವ ಮನವಿಗಳಿಗೆ ಬೆಲೆ ನೀಡಲಾಗುವುದಿಲ್ಲ ಎಂದು ಉತ್ತರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos