ಬಸ್ ಆದ್ಯತಾ ಪಥ ಉದ್ಘಾಟನೆಗಿಲ್ಲ ಭಾಗ್ಯ

ಬಸ್ ಆದ್ಯತಾ ಪಥ ಉದ್ಘಾಟನೆಗಿಲ್ಲ ಭಾಗ್ಯ

ಬೆಂಗಳೂರು, ನ. 1: ಬಹುನಿರೀಕ್ಷಿತ ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರತ್ಯೆಕ ಬಸ್ ಸಂಚಾರದ  ಆದ್ಯತಾ ಪಥಕ್ಕೆ  ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಅನಿವಾರ್ಯವಾಗಿ ನವಂಬರ್ 1ರ ಬದಲಿಗೆ 15ಕ್ಕೆ ಮುಂದೂಡಲ್ಪಟ್ಟಿದೆ.

ಕನ್ನಡ ರಾಜ್ಯೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳು ಮತ್ತು ಪೂರಕ ಸಿದ್ದತೆಗಳಾಗಿಲ್ಲ ಅಲ್ಲದೆ, ಈಗಾಗಲೇ ಅಳವಡಿ ಸಿರುವ ಬೋರ್ಡುಗಳು ಅಪಘಾತಗಳಿಂದ ಹಾಳಾಗಿರುವುದರಿಂದ ಎರಡು ವಾರಗಳ ಮಟ್ಟಿಗೆ ಯೋಜನೆಯ ಉದ್ಘಾಟನೆಯನ್ನು ಮುಂದೂಡಲಾಗಿದೆ.

ನವೆಂಬರ್ 15 ರಂದು ಚಾಲನೆ ದೊರೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬಸ್ ಸಂಚಾರಕ್ಕೆ ಮೀಸಲಿಟ್ಟ ಪಥದ ಅಗಲ 3.5ಮೀ. ಮಾರ್ಗದಲ್ಲಿ 18 ಕಿ.ಮೀ. ಬಸ್‌ಗಳು ಸಂಚರಿಸಬೇಕು. ಇದಕ್ಕಾಗಿ ರಸ್ತೆಯ ಒಂದು ಬದಿಯಲ್ಲಿ ಬೋರ್ಡ್ಗಳ ಅಳವಡಿಕೆ, ಥರ್ಮೋ  ಪ್ಲಾಸ್ಟಿಕ್ ಪೇಂಟಿಂಗ್, ಸೈನೇಜ್‌ಗಳನ್ನು ಹಾಕುವ ಕೆಲಸ ಆಗಬೇಕಾಗಿದೆ.

ಅಧಿಕೃತವಾಗಿ ಚಾಲನೆ ದೊರೆಯದಿದ್ದರೂ ಅ. 20 ರಿಂದಲೇ ಆದ್ಯತಾ ಪಥದಲ್ಲಿ ಬಸ್ಸುಗಳು ಸಂಚಾರ ಮಾಡಲು ಆರಂಭಿಸಿವೆ. ನಿತ್ಯ 8೦೦ಕ್ಕೂ ಅಧಿಕ ಬಸ್‌ಗಳು ಸಾವಿರಾರು ಟ್ರಿಪ್ ಗಳಲ್ಲಿ ಇಲ್ಲಿ ಓಡಾಡುತ್ತಿವೆ. ಆದ್ಯತಾ ಪಥದ ಶಿಸ್ತು ಪಾಲನೆ ಹಾಗೂ ಉಲ್ಲಂಘಿಸುವವರ ಪತ್ತೆಗೆ ವಿಶೇಷ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ನಿರ್ವಹಣೆಗೆ ಎರಡೂ ಮಾರ್ಗಗಳಲ್ಲಿ 24 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಳೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ೧೫ರಂದು ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿದೆ. ಮುಂದಿನ ದಿನಗಳಲ್ಲಿ ಮಾರ್ಗದುದ್ದಕ್ಕೂ ಸಂಚಾರ ಪೊಲೀಸರು ಕೂಡ ಕ್ಯಾಮೆರಾ ಸೇರಿದಂತೆ ಹಲವು ರೀತಿಯ ಪೂರಕ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸುತ್ತಿದ್ದಾರೆ. ಎರಡು ವಾರಗಳಲ್ಲಿ ಅಧಿಕೃತವಾಗಿ ಆರಂಭಗೊಳ್ಳಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos