ಎಂಆರ್ಪಿಎಲ್‍ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊರಕೆ ಮೆರವಣಿಗೆ

  • In State
  • January 10, 2019
  • 266 Views
ಎಂಆರ್ಪಿಎಲ್‍ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊರಕೆ ಮೆರವಣಿಗೆ

ಮಂಗಳೂರು: ಎಂಆರ್ಪಿಎಲ್‍ 4ನೇ ಹಂತದ ಕೋಕ್‍ ಸಲ್ಫರ್‍ ಘಟಕದಿಂದ ಉಂಟಾದ ಕೆಮಿಕಲ್ ಮಾಲಿನ್ಯ ಸಮಸ್ಯೆಗಳ ವಿರುದ್ಧ ಪೊರಕೆ ಮೆರವಣಿಗೆ ನಡೆಸಿ ಧರಣಿ ಸತ್ಯಗ್ರಹ ನಡೆಸಲಾಯಿತು.ಇಂದು ಬೆಳಗ್ಗೆ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ  ಯಿಂದ ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಪೊರಕೆ ಮೆರವಣಿಗೆಯಲ್ಲಿ ಆರು ಅಂಶಗಳ ಸರಕಾರಿ ಆದೇಶ ಜಾರಿಗೊಳಿಸಿ, ಎಂಆರ್ಪಿಎಲ್‍ ಮಾಲಿನ್ಯದಿಂದ ಗ್ರಾಮವನನ್ಉ ರಕ್ಷಿಸಿ ಹಾಗೂ ಜಿಲ್ಲಾಡಳಿತದ ಮೌನದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‍ಐ ರಾಜ್ಯಾಧ್ಯಕ್ಷ ಹಾಗೂ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಮುಖಂಡ ಮುನೀರ್‍ ಕಾಟಿಪಳ್ಳ, ತೋಕೂರು ಗ್ರಾಮಸ್ಥರು ವರ್ಷಗಳ ಕಾಲ ನಡೆಸಿದ ಹೋರಾಟದ ಪರಿಣಾಮವಾಗಿ ಸರಕಾರ ಹೊರಡಿಸಿದ 6 ಅಂಶಗಳ ಪರಿಹಾರ ಕ್ರಮದ ಆದೇಶವನ್ನು ಎಂಆರ್‍ಪಿಎಲ್‍ ಜಾರಿಗೆ ತರದೆ ವಂಚಿಸಿದೆ. ಜಿಲ್ಲಾಡಳಿತವೂ ಕಂಪನಿಯ ಜೊತೆಗೆ ಶಾಮೀಲಾಗಿ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.

ಪರಿಸರ ನಿಯಮಗಳನ್ನು ಉಲ್ಲಂಘಿಸಿ, ಹಸಿರು ವಲಯ ನಿರ್ಮಿಸದೆ ಕಂಪನಿಯು ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ಪೆಟ್‍ಕೋಕ್‍, ಸಲ್ಫರ್ ಗಟಕ ಸ್ಥಾಪಿಸಿದ ಪರಿಣಾಮ ಸಮೀಪದ ಗ್ರಾಮಗಳ ಜನತೆಯ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಿತ್ತು. ಪೆಟ್‍ಕೋಕ್‍, ಸಲ್ಫರ್‍ ಹಾರುಬೂದಿ, ಶಬ್ದ, ವಾಯು ಮಾಲಿನ್ಯದ ವ್ಯಾಪಕ ಸಮಸ್ಯೆಗಳ ವಿರುದ್ಧ ಜನತೆ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಸಿರು ವಲಯ ನಿರ್ಮಾಣ ಸಹಿತ 6 ಅಂಶಗಳ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕೃತ ಆದೇಶ ಹೊರಡಿಸಿತ್ತು ಎಂದು ಮುನೀರ್‍ ಕಾಟಿಪಳ್ಳ ಹೇಳಿದರು.

ಆದೇಶ ಜಾರಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಸದ, ಶಾಸಕರು, ಸದಸ್ಯರಾಗಿರುವಂತೆ ಸಮಿತಿ ರಚನೆಯಾಗಿತ್ತು. ಆದರೆ ಸರಕಾರದ ಆದೇಶ ಹೊರಟು ವರ್ಷಗಳು ಕಳೆದರೂ ಕೂಡಾ ಕಂಪನಿಯು ಆದೇಶವನ್ನು ಜಾರಿಗೆ ತರದೆ ಕಾಲಹರಣ ಮಾಡುತ್ತಿದೆ. ಜಿಲ್ಲಾಧಿಕಾರಿ ಕನಿಷ್ಠ ಸಮಿತಿಯ ಸಭೆಯನ್ನೂ ಸೇರಿಸದೆ ಕಂಪನಿಯ ಪರ ಮೃದು ಧೋರಣೆ ತೋರಿಸುತ್ತಿದ್ದಾರೆ ಎಂದು ಮುನೀರ್‍ ಕಾಟಿಪಳ್ಳ ಬೇಸರ ವ್ಯಕ್ತಪಡಿಸಿದರು.

ಮಾರಕ ಮಾಲಿನ್ಯದಿಂದ ಕಂಗೆಟ್ಟಿರುವ ಸ್ಥಳೀಯರು ಮತ್ತೊಮ್ಮೆ ತೀವ್ರತರದ ಹೋರಾಟಕ್ಕೆ ಮುಂದಾಗಿದ್ದು, ಪಂಪನಿಯ ವಂಚನೆ, ಜಿಲ್ಲಾಡಳಿತದ ಕಂಪನಿ ಪರ ನಿಲುವುಗಳನ್ನು ವಿರೋಧಿಸಿ, ಸರಕಾರದ ಆದೇಶ ತಕ್ಷಣ ಜಾರಿಗೆ ತರಬೇಕು. ಮಾಲಿನ್ಯಕಾರಕ, ವಂಚಕ ಕಂಪನಿ ಎಂಆರ್‍ ಪಿಎಲ್‍ನ್ನು ಸಾವಿರ ೆಕರೆ ಕೃಷಿ ಭೂಮಿಯಲ್ಲಿ ವಿಸ್ತರಿಸುವ ಯೋಜನೆ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನಾ ಧರಣಿಯಲ್ಲಿ ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್‍, ಜೊಕಟ್ಟೆ ಗ್ರಾಪಂ ಸದಸ್ಯರಾದ ಅಬೂಬಕರ್, ಹೇಮಾವತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos