ಪೊಲೀಸರಿಗೆ ದೂರು ನೀಡಿದ ಬಾಲಕ..!

ಪೊಲೀಸರಿಗೆ ದೂರು ನೀಡಿದ ಬಾಲಕ..!

ತಿರುವನಂತಪುರಂ, ನ. 29 : ನಾನಾ ರೀತಿಯ ದೂರುಗಳು ಪ್ರತಿದಿನವೂ ಬರುತ್ತಲೇ ಇರುತ್ತವೆ. ಆದರೆ, ಇಲ್ಲೊಂದು ದೂರು ಬಂದಿರುವುದು ವಿಚಿತ್ರವಾಗಿದೆ. 10 ವರ್ಷದ ಪುಟಾಣಿ ಬಾಲಕನೊಬ್ಬ ಒಂದು ಚೀಟಿಯನ್ನು ಜೇಬಿನಿಂದ ತೆಗೆದು
ಮೆಪ್ಪಯೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಬಾಲಕ ತಾನೇ ಕೈಬರಹದಲ್ಲಿ ಬರೆದಿದ್ದ ದೂರೊಂದನ್ನು ಪೊಲೀಸರಿಗೆ ನೀಡಿ, ‘ನನ್ನ ಮತ್ತು ನನ್ನ ತಮ್ಮನ ಸೈಕಲ್ ಹಾಳಾಗಿದ್ದ ಕಾರಣ ರಿಪೇರಿ ಮಾಡಿಕೊಡಲು ಸೈಕಲ್ ಶಾಪ್ಗೆ ಕೊಟ್ಟಿದ್ದೆವು. ಆತ 200 ರೂ.ಗಳನ್ನು ತೆಗೆದುಕೊಂಡಿದ್ದಾನೆ. 2 ತಿಂಗಳಾದರೂ ಆ ಸೈಕಲ್ಗಳನ್ನು ವಾಪಾಸ್ ಕೊಟ್ಟಿಲ್ಲ. ನಾವು ಫೋನ್ ಮಾಡಿದರೆ ಬೇಗ ರೆಡಿ ಮಾಡಿ ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಾರೆ ಎಂದು ದೂರ ನೀಡಿದ.

ಫ್ರೆಶ್ ನ್ಯೂಸ್

Latest Posts

Featured Videos