ಬಿಜೆಪಿ-ಜೆಡಿಯು ಮೈತ್ರಿ ಬಿಹಾರಕ್ಕೆ ಸೀಮಿತ: ಜೆಡಿಯು

ಬಿಜೆಪಿ-ಜೆಡಿಯು ಮೈತ್ರಿ ಬಿಹಾರಕ್ಕೆ ಸೀಮಿತ: ಜೆಡಿಯು

ಪಟ್ನಾ, ಮಾ.6, ನ್ಯೂಸ್ಎಕ್ಸ್ ಪ್ರೆಸ್‍:  ಬಿಜೆಪಿ ಜತೆಗಿನ ಮೈತ್ರಿ ಬಿಹಾರಕ್ಕೆ ಸೀಮಿತ ಎಂದು ಜೆಡಿಯು ಸ್ಪಷ್ಟಪಡಿಸಿದೆ. ಜಾರ್ಖಂಡ್, ಉತ್ತರ ಪ್ರದೇಶ, ಕರ್ನಾಟಕ, ರಾಜಸ್ಥಾನ, ಛತ್ತೀಸಗಡ, ಲಕ್ಷದ್ವೀಪ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ನ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಯು ನಿರ್ಧರಿಸಿದೆ.

ಪಟ್ನಾದಲ್ಲಿ ನಡೆದ ಜೆಡಿಯುನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜೆಡಿಯು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯಬೇಕು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಚುನಾವಣಾ ಆಯೋಗದ ಮಾನದಂಡಗಳ ಪ್ರಕಾರ, ನಾಲ್ಕು ರಾಜ್ಯಗಳಲ್ಲಿ ಕನಿಷ್ಠ ಶೇ 6ರಷ್ಟು ಮತ ಪಡೆದ ಅಥವಾ ಕನಿಷ್ಠ ಮೂರು ರಾಜ್ಯಗಳಲ್ಲಿನ ಒಟ್ಟು ಲೋಕಸಭಾ ಕ್ಷೇತ್ರಗಳಲ್ಲಿ ಶೇ 2ರಷ್ಟರಲ್ಲಿ ಜಯಗಳಿಸಿದ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲಾಗುತ್ತದೆ. ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಮಟ್ಟದ ಪಕ್ಷವೆಂಬ ಮಾನ್ಯತೆ ಪಡೆದರೂ ರಾಷ್ಟ್ರೀಯ ಪಕ್ಷದ ಮಾನ್ಯತೆ ದೊರೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos