ಕಡಲಕ್ಕೆ ಬಾರದ ಹಕ್ಕಿಗಳು

ಕಡಲಕ್ಕೆ ಬಾರದ ಹಕ್ಕಿಗಳು

ಮಂಗಳೂರು, ಜ. 6 : ಪಕ್ಷಿ ವೀಕ್ಷಕರಿಗೆ ಕಡಲ ಹಕ್ಕಿಗಳ ಬಗೆಗೆ ಸದಾ ಕುತೂಹಲ. ಮೀನುಗಳನ್ನು ತಿನ್ನುತ್ತಾ ಕಡಲಿನಲ್ಲೇ ವಾಸಿಸುವ ಈ ಹಕ್ಕಿಗಳು ಕಡಲತೀರಕ್ಕೆ ಬರುವುದು ಕಡಿಮೆ. ಅವುಗಳ ವೀಕ್ಷಣೆಗೆ ಸಮುದ್ರದಲ್ಲೇ ಸಾಗಬೇಕು. ಕಡಲಿನ ಮೀನುಗಳನ್ನು ಬೇಟೆಯಾಡುವಾಗ ಅವುಗಳನ್ನು ನೋಡಬಹುದು ಎಂದು ಕೋಸ್ಟಲ್ ಬರ್ಡ್ ವಾಚರ್ಸ್ ನೆಟ್ವರ್ಕ್ ಸದಸ್ಯ ಎಂ. ಶಿವಶಂಕರ್ ತಿಳಿಸಿದ್ದಾರೆ.
ಸ್ಕುವಾ ಪ್ರಭೇದಕ್ಕೆ ಸೇರಿದ ಆರ್ಟಿಕ್ ಸ್ಕುವಾ, ಪಮೋರಿಯನ್ ಸ್ಕುವಾ, ಲಾಂಗ್ಟೇಲ್ಡ್ ಸ್ಕುವಾ, ಸ್ಟಾಮ್ರ್ ಪ್ಯಾಟ್ರೆಲ್, ಶೀಯರ್ ವಾಟರ್ ಬರ್ಡ್, ಮಾಸ್ಕ್ಡ್ ಬೂಬಿ, ಫ್ರಿಗೇಟ್ ಬರ್ಡ್ ಇತ್ಯಾದಿ ಸಮುದ್ರ ಹಕ್ಕಿಗಳನ್ನು 10 ವರ್ಷಗಳ ಅಭಿಯಾನದಲ್ಲಿ ಮಂಗಳೂರು ಆಸುಪಾಸಿನ ಸಮುದ್ರದಲ್ಲಿ ಪತ್ತೆ ಮಾಡಲಾಗಿದೆ. ಈ ಬಾರಿ ಸ್ಕುವಾ ಪ್ರಭೇದದ ಹಕ್ಕಿಗಳು ಅಲ್ಲದೆ ಡಾಲ್ಪಿನ್, ಸೀ ಗಲ್ಸ್ಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos