ಬಾಳೆಗೊನೆ ಕಳವು

  • In State
  • January 5, 2021
  • 207 Views
ಬಾಳೆಗೊನೆ ಕಳವು

ಹನೂರು: ಜಿಲ್ಲೆಯ ಹನೂರು ತಾಲ್ಲೂಕಿನ ನಾಗನತ್ತ ಗ್ರಾಮದ ಜಮೀನೊಂದಕ್ಕೆ ಕಳ್ಳರು ನುಗ್ಗಿ ಸುಮಾರು 200 ಬಾಳೆ ಗೊನೆಗಳನ್ನು ಕಳವು ವಾಡಿದ್ದಾರೆ.
ಹನೂರು ತಾಲ್ಲೂಕಿನ ನಾಗನತ್ತ ಗ್ರಾಮದ ನಂದೀಶ್ ಎಂಬವರು ಗ್ರಾಮದ ಹೊರವಲಯದಲ್ಲಿ 2.5 ಎಕರೆ ಜಮೀನಿನಲ್ಲಿ ಬಾಳೆ ಫಸಲನ್ನು ಬೆಳೆದಿದ್ದರು. ಬಾಳೆ ಗೊನೆಗಳನ್ನು ಕೆಲವೇ ದಿನಗಳಲ್ಲಿ ಕಟಾವು ವಾಡಬೇಕಿತ್ತು. ಆದರೆ ಅಷ್ಟರಲ್ಲೇ ಕದೀಮರು ಬಾಳೆ ಗೊನೆಗಳನ್ನು ಕಟಾವು ಮಾಡಿ ಕೊಂಡೊಯ್ದಿದ್ದಾರೆ. ಸೋಮವಾರ ಬೆಳಿಗ್ಗೆ ರೈತ ನಂದೀಶ್ ಜಮೀನಿಗೆ ಹೋಗಿ ನೋಡಿದಾಗ ಈ ವಿಷಯ ತಿಳಿದಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos