ಅಮೇರಿಕನ್ ಪ್ರಜೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಅಮೇರಿಕನ್  ಪ್ರಜೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಬೆಂಗಳೂರು: ಗ್ರಾಮಾಂತರ
ಆವಲಹಳ್ಳಿ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದ ಮರಕ್ಕೆ ಅಮೇರಿಕನ್ ಪ್ರಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತನು ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿದ್ದು, ಟೌಲ್  ಜಿ. (45)  ಎಂದು ತಿಳಿದುಬಂದಿದೆ.
ಇದೇ ತಿಂಗಳ 10 ರಂದು ಟೌಲ್ ಬೀ ಕಾಣೆಯಾಗಿದ್ದ. ಸ್ನೇಹಿತ ಗಣೇಶ್ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ
ನಾಪತ್ತೆ ಪ್ರಕರಣ ದಾಖಲಿಸಿದ್ದರು..

ಮೃತನ ಸ್ನೇಹಿತ ಗಣೇಶ್, ಯೂಟ್ಯೂಬ್ ವಿಡಿಯೋವನ್ನ ಆಧರಿಸಿ ಮೃತನ ಲೋಕೇಶನ್
ನನ್ನು ಪತ್ತೆ ಹಚ್ಚಿದ್ದಾನೆ. ಬೆಂಗಳೂರು ಹೊರವಲಯದ ಆವಲಹಳ್ಳಿ ಕೆರೆಯ ನಿರ್ಜನ ಪ್ರದೇಶದ ಮರದಲ್ಲಿ
ಟೌಲ್ ಬೀ  ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಟೌಲ್ ಬೇಗ ಸಾವು ಬರುತ್ತೆ ಅಂತ ನೇಣಿಗೆ ಶರಣಾಗುತ್ತೇನೆಂದು ತನ್ನ ಹೆಲ್ಮೆಟ್
ಕ್ಯಾಮರಾ ದಲ್ಲಿ ಹೇಳಿಕೊಂಡಿದ್ದಾನೆ. ಯು ಟ್ಯೂಬ್ನಲ್ಲಿ ಅಪ್ ಲೋಡ್ ಮಾಡಿ, ಬಳಿಕ ಹೆಲ್ಮೆಟ್ ಕ್ಯಾಮರಾದಲ್ಲಿಟ್ಟು
ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.

ಈ ಕುರಿತು ಆವಲಹಳ್ಳಿ ಪೊಲೀಸರು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos