ಕಾರ್ಮಿಕರ ಪಟ್ಟಿಗೆ ನೇಕಾರರ ಸೇರ್ಪಡೆ

ಕಾರ್ಮಿಕರ ಪಟ್ಟಿಗೆ ನೇಕಾರರ ಸೇರ್ಪಡೆ

ದೊಡ್ಡಬಳ್ಳಾಪುರ: ಲಾಕ್‌ಡೌನ್ ನಂತರ ತಾಲ್ಲೂಕಿನ ಹೂವು ಬೆಳೆಗಾರರು ಹಾಗೂ ನೇಕಾರರ ಸಂಕಷ್ಟ ಕುರಿತು ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಹೂವು ಬೆಳೆಗಾರರಿಗೆ ಹೆಕ್ಟೇರ್ ೨೫ ಸಾವಿರ ನಷ್ಟ ಪರಿಹಾರ ನೀಡುವ ಕುರಿತು ಘೋಷಣೆ ಮಾಡಿತ್ತು. ಆದರೆ ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಇಲ್ಲಿಯವರೆಗೆ ತಾಲ್ಲೂಕಿನ ೭೫೦ ಹೂವು ಬೆಳೆಗಾರರಿಗೆ ೨೧ ಲಕ್ಷ ಮಾತ್ರ ಪರಿಹಾರ ಬಂದಿದೆ. ಇದೇ ರೀತಿ ನೇಕಾರ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಕುರಿತಂತೆ ಮನವಿ ಮಾಡಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ ಇದಕ್ಕೆ ಹಣ ಬಿಡುಗಡೆ ಮಾಡಬೇಕು. ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನಿಂದ ೭೦ ಜನ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್-೧೯ ಪರೀಕ್ಷೆಗೆ ಅಗತ್ಯ ಇರುವ ಕಿಟ್ ನೀಡುವಂತೆ ಮನವಿ ಮಾಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos