ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್

ಬ್ಯಾಂಕಾಕ್ , ಜು.30 : ಭಾರತದ ಪಿ.ವಿ. ಸಿಂಧು ಕಳೆದ ಎರಡು ಕೂಟಗಳಲ್ಲಿ ಜಪಾನಿನ ಅಕಾನೆ ಯಮಾಗುಚಿ ಶರಣಾಗಿ ನಿರಾಶೆ ಮೂಡಿಸಿರಬಹುದು. ಮಂಗಳವಾರದಿಂದ ಆರಂಭವಾಗುವ  ಗೆಲ್ಲುವ ವಿಶ್ವಾಸದಿಂದಲೇ ಕಣಕ್ಕೆ ಇಳಿಯಲಿದ್ದಾರೆ.
ಕಳೆದ ಎರಡು ವಾರ ಸಿಂಧು ಪಾಲಿಗೆ ಯಮಾಗುಚಿ ಅಪಾಯ ಕಾರಿಯಾಗಿದ್ದರು. ಇಂಡೋನೇಶ್ಯ ಓಪನ್ನ ಫೈನಲ್ನಲ್ಲಿ ಅವರಿಗೆ ಶರಣಾಗಿದ್ದ ಸಿಂಧು, ಜಪಾನ್ ಓಪನ್ನ ಕ್ವಾರ್ಟರ್ ಫೈನಲ್ನಲ್ಲಿ ಮತ್ತೆ ಮುಖಾಮುಖೀಯಾದಾಗ ನೇರ ಗೇಮ್ಗಳಿಂದ ಸೋತಿದ್ದರು. ಇದೀಗ 7 ತಿಂಗಳ ಪ್ರಶಸ್ತಿ ಬರವನ್ನು ನೀಗಿಸಲು ಸಿಂಧು ಹಾತೊರೆಯುತ್ತಿದ್ದಾರೆ. ನಾಲ್ಕನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಚೀನದ ಹಾನ್ ಅವರನ್ನು ಎದುರಿಸಲಿದ್ದಾರೆ. ಜಪಾನ್ ಓಪನ್ನಲ್ಲಿ ಸಿಂಧು ಈ ಎದುರಾಳಿ ಸುಲಭವಾಗಿ ಮಣಿಸಿದ್ದರು. ಸಿಂಧು ಅವರಿಗೆ ನಿಜವಾದ ಪರೀಕ್ಷೆ ಎದುರಾಗುವುದು ಕ್ವಾರ್ಟರ್ ಫೈನಲ್ನಲ್ಲಿ. ಅಲ್ಲಿ ಅವರಿಗೆ ಆರನೇ ಶ್ರೇಯಾಂಕದ ಆತಿಥೇಯ ನಾಡಿನ ರಚನಾಕ್ ಇಂತನಾನ್ ಎದುರಾಗಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos