ತಳಪತಿ ವಿಜಯ್‌ ರಾಜಕೀಯ ಪ್ರವೇಶ

ತಳಪತಿ ವಿಜಯ್‌ ರಾಜಕೀಯ ಪ್ರವೇಶ

ಬೆಂಗಳೂರು: ಕಾಲಿವುಡ್‌ನಲ್ಲಿ ಇಂದಿಗೂ ವಿಜಯ್ ಗೆಲ್ಲುವ ಕುದುರೆ. ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿವೆ. ತಮಿಳುನಾಡಿನಾದ್ಯಂತ ಅವರಿಗೆ ಅಭಿಮಾನಿ ಬಳಗಗಳಿವೆ. ಆದರೆ ತಮಿಳುನಾಡಿನಲ್ಲಿ ರಾಜಕೀಯ ಯಶಸ್ಸು ಸಾಧಿಸಲು ಇಷ್ಟೇ ಸಾಕೇ?

ಎಐಎಡಿಎಂಕೆ ಪಕ್ಷವನ್ನು ಹತ್ತಾರು ವರ್ಷಗಳ ಕಾಲ ಬಿಗಿಮುಷ್ಟಿಯಲ್ಲಿ ಮುನ್ನಡೆಸಿದ ಜನಪ್ರಿಯ ನಾಯಕಿ ಜೆ.ಜಯಲಲಿತಾ ನಿಧನದ ನಂತರ ತಮಿಳುನಾಡು ರಾಜಕೀಯದ ಪ್ರಭೆ ತುಸು ಮಸುಕಾಗಿತ್ತು. ಡಿಎಂಕೆ ಪಕ್ಷದ ಕೆ.ಕರುಣಾನಿಧಿ ಅವರ ಸಾವಿನ ನಂತರ ಅಧಿಕಾರಕ್ಕೆ ಬಂದ ಸ್ಟಾಲಿನ್ ಪಕ್ಷದ ಮೇಲೆ ಮೊದಲಿನಿಂದಲೇ ಹಿಡಿದ ಸಾಧಿಸಿದ್ದವರು.

ತಮಿಳುನಾಡು ರಾಜ್ಯದಲ್ಲಷ್ಟೇ ಅಲ್ಲ, ಭಾರತದ ವಿವಿಧೆಡೆ ತಮಿಳುನಾಡು ರಾಜಕಾರಣದ ವಿದ್ಯಮಾನಗಳು ನೆನಪಾಗಲು ಕಾರಣ ಇದೆ. ಅದೆಂದರೆ ತಮಿಳು ಸ್ಟಾರ್‌ ನಟ ವಿಜಯ್.

ಇದೀಗ 49ರ ಹರೆಯದಲ್ಲಿರುವ ವಿಜಯ್ ಅವರ ಸಿನಿಮಾಗಳು ಇಂದಿಗೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ತಂದುಕೊಡುತ್ತಿವೆ. ಸಿನಿಮಾ ಕ್ಷೇತ್ರದಲ್ಲಿ ಸಿಕ್ಕಿರುವ ಯಶಸ್ಸಿನ ಲಾಭವನ್ನು ರಾಜಕೀಯ ಕ್ಷೇತ್ರದಲ್ಲಿ ಪಡೆದುಕೊಳ್ಳುವ ಪ್ರಯತ್ನವನ್ನು ವಿಜಯ್ ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ತಮ್ಮ ಹೊಸ ರಾಜಕೀಯ ಪಕ್ಷವಾದ “ತಮಿಳಗ ವೆಟ್ರಿ ಕಳಗಂ” ಪಕ್ಷವನ್ನು ವಿಜಯ್ ಘೋ‍ಷಿಸಿದರು. ರಾಜ್ಯದಲ್ಲಿ 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos