ಠಾಕೂರ್ ಬ್ಯಾಟಿಂಗ್ ಪ್ರಶಂಸಿಸಿದ ವಿರಾಟ್

ಠಾಕೂರ್ ಬ್ಯಾಟಿಂಗ್ ಪ್ರಶಂಸಿಸಿದ ವಿರಾಟ್

ಕಟಕ್ , ಡಿ. 23 : ನಿನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ಭರ್ಜರಿ ಜಯಗಳಿಸಿದ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ ಟೀಮ್ ಇಂಡಿಯಾ ಸಂಕಷ್ಟದಲ್ಲಿ ಸಿಲುಕಿತು. ಕೊನೆಯದಾಗಿ ತಂಡಕ್ಕೆ ಆಸರೆಯಾಗಿದ್ದ ಶಾರ್ದುಲ್ ಠಾಕೂರ್ಗೆ ಕ್ಯಾಪ್ಟನ್ ಕೊಹ್ಲಿ ಪ್ರಶಂಸಿದ್ದಾರೆ.
ಇಂದು ಮರಾಠಿಯಲ್ಲಿ ಟ್ವೀಟ್ ಮಾಡಿದ ಕೊಹ್ಲಿ, “ತುಲಾ ಮಾನ್ಲಾ ರೆ ಠಾಕೂರ್”, ಇದು “ಹ್ಯಾಟ್ಸ್ ಆಫ್ ಯು ಠಾಕೂರ್” ಎಂದು ಅವರ ಟ್ವೀಟ್ ಸೂಚಿಸುತ್ತದೆ. ಈ ಮೂಲಕ ವಿರಾಟ್ ವೇಗದ ಬೌಲರ್ ಆದ ಶಾರ್ದುಲ್ ಠಾಕೂರ್ಗೆ ಬ್ಯಾಟಿಂಗ್ನ್ನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯ ಗೆಲ್ಲುವ ಮೂಲಕ ಮೂರು ಏಕದಿನ ಪಂದ್ಯಗಳಲ್ಲಿ 2-1 ಅಂತರದಿಂದ ಭಾರತ ತಂಡವು ಸರಣಿಯನ್ನ ತಮ್ಮ ಕೈವಶಮಾಡಿಕೊಂಡಿತು.
ಪಂದ್ಯದ ನಂತರ ಮಾತನಾಡಿದ ವಿರಾಟ್, ನಾನು ಮೈದಾನದಿಂದ ಹೊರ ನಡೆದಾಗ, ಶಾರ್ದುಲ್ ಮತ್ತು ಜಡೇಜಾ ಫಿನಿಶಿಂಗ್ ನೋಡಲು ಕಾತುರನಾದ್ದೆ, ಈ ಇಬ್ಬರು ಆಟಗಾರರು ಪಂದ್ಯವನ್ನ ಮುಗಿಸುವುದು ದೊಡ್ಡ ಸವಾಲು ಆಗಿತ್ತು ಎಂದರು. ಈ ಸಂದರ್ಭದಲ್ಲಿ ಜಡೇಜಾ ಆತ್ಮವಿಶ್ವಾಸದಿಂದ ಕಾಣುತ್ತಿದ್ದರು ಎಂದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos