ಠಾಕ್ರೆ ಪದಗ್ರಹಣಕ್ಕೆ ಗಣ್ಯರು

ಠಾಕ್ರೆ ಪದಗ್ರಹಣಕ್ಕೆ ಗಣ್ಯರು

ಮುಂಬೈ, ನ. 28 : ಉದ್ಧವ್ ಠಾಕ್ರೆ ಪದಗ್ರಹಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ಗಣ್ಯರಿಗೆ ಆಹ್ವಾನ ನೀಡಿದ್ದಾರೆ.
ಮಹಾ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಪದಗ್ರಹಣ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಫೋನ್ ಕರೆ ಮಾಡಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸಮಾರಂಭಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಪ್ರಧಾನಿ ಜತೆಗೆ ದೇಶದ ಪ್ರಮುಖ ಗಣ್ಯಾತಿಗಣ್ಯರಿಗೆ ಉದ್ಧವ್ ಆಹ್ವಾನ ನೀಡಿದ್ದಾರೆ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಜರಿ ಬಗ್ಗೆ ಈವರೆಗೂ ಖಚಿತವಾಗಿಲ್ಲ. ಮಧ್ಯ ಪ್ರದೇಶ ಸಿಂಎ ಕಮಲ್ನಾಥ್, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಖಚಿತಪಡಿಸಿದ್ದಾರೆ. ರಾಜಕಾರಣಿಗಳ ಹೊರತಾಗಿ ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅನಿಲ್ ಕಪೂರ್, ಉದ್ಯಮಿಗಳಾದ ರತನ್ ಟಾಟಾ ಹಾಗೂ ಮುಕೇಶ್ ಅಂಬಾನಿ ಅವರಿಗೆ ಆಹ್ವಾನ ತಲುಪಿರುವುದಾಗಿ ವರದಿಯಾಗಿದೆ. ಆದರೆ, ಇವರಲ್ಲಿ ಎಷ್ಟು ಮಂದಿ ಭಾಗಿಯಾಗಲಿದ್ದಾರೆ ತಿಳಿದುಬಂದಿಲ್ಲ.
700 ರೈತರಿಗೂ ಸಮಾರಂಭಕ್ಕೆ ಆಹ್ವಾನ ಕಳುಹಿಸಲಾಗಿದ್ದು, ಒಟ್ಟು ಅತಿಥಿಗಳ ಸಂಖ್ಯೆ 40,000 ತಲುಪಿದೆ. ಬಿಜೆಪಿ ನೇತೃತ್ವದ ಸರ್ಕಾರದ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಸುವಂತೆ ರಾಜ್ಯಪಾಲರ ಕಚೇರಿಗೆ ಮಂಗಳವಾರ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದೇಶದ ಬೆನ್ನಲೇ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಶಿವಸೇನಾ–ಎನ್ಸಿಪಿ–ಕಾಂಗ್ರೆಸ್ ಜತೆಯಾಗಿ ಸರ್ಕಾರ ರಚಿಸಿದೆ.ಮಹಾ ವಿಕಾಸ್ ಅಘಾಡಿಯ ನಾಯಕನಾಗಿ ಉದ್ಧವ್ ಠಾಕ್ರೆ ಆಯ್ಕೆಯಾಗಿದ್ದು, ಗುರುವಾರ ಸಂಜೆ ಶಿವಾಜಿ ಪಾರ್ಕ್ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉದ್ಧವ್ ಅವರು ಠಾಕ್ರೆ ಕುಟುಂಬದಿಂದ ಮುಖ್ಯಮಂತ್ರಿಯಾಗುತ್ತಿರುವ ಮೊದಲ ವ್ಯಕ್ತಿ ಹಾಗೂ ಪಕ್ಷದ ಮೂರನೇ ವ್ಯಕ್ತಿಯಾಗಿದ್ದಾರೆ. ಶಿವಸೇನಾದ ಮನೋಹರ್ ಜೋಶಿ(1995–1999) ಮತ್ತು ನಾರಾಯಣ್ ರಾಣೆ(ಫೆಬ್ರುವರಿ 1999–ಅಕ್ಟೋಬರ್ 1999) ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದರು. 59 ವರ್ಷ ವಯಸ್ಸಿನ ಉದ್ಧವ್ ಠಾಕ್ರೆ ಶಿವಸೇನಾದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos