ಭಾರತ vs ದಕ್ಷಿಣ ಆಫ್ರಿಕಾ: ಇತಿಹಾಸ ಸೃಷ್ಟಿಸಲು ಹೊರಟಿದೆ..!

ಭಾರತ vs ದಕ್ಷಿಣ ಆಫ್ರಿಕಾ: ಇತಿಹಾಸ ಸೃಷ್ಟಿಸಲು ಹೊರಟಿದೆ..!

ಬೆಂಗಳೂರು: ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಹೀಗೆ ಭಾರತ ಎಲ್ಲೆಲ್ಲಾ ಟೆಸ್ಟ್ ಸರಣಿ ಆಡಿದೆಯೋ ಅಲ್ಲೆಲ್ಲಾ ಆತಿಥೇಯರನ್ನೇ ಮಣ್ಣು ಮುಕ್ಕಿಸಿ ಸರಣಿ ಗೆದ್ದು ಪರಾಕ್ರಮ ಮೆರೆದಿದೆ. ಆದರೆ ಭಾರತ ಟೆಸ್ಟ್ ಸರಣಿ ಗೆಲ್ಲದ ಪ್ರಮುಖ ದೇಶವೆಂದರೆ ಅದು ದಕ್ಷಿಣ ಆಫ್ರಿಕಾ. 3 ದಶಕಗಳಿಂದಲೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಆಡುತ್ತಿದ್ದರೂ ಒಮ್ಮೆಯೂ ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿಯಾದರೂ ಸಾಧಿಸಲು ಪಣ ತೊಟ್ಟಿದೆ.

ಭಾರತಕ್ಕೆ ಈ ಬಾರಿಯೂ ಅಗ್ನಿಪರೀಕ್ಷೆ ಎದುರಾಗುವುದು ಖಚಿತ. ಕೊಹ್ಲಿ, ರೋಹಿತ್ ಸೇರಿದಂತೆ ಪ್ರಮುಖರು ತಂಡದಲ್ಲಿದ್ದು ಈ ಮೊದಲು ಸಾಧಿಸಲಾಗದ್ದನ್ನು ಈ ಬಾರಿ ಸಾಧಿಸಲು ಎದುರು ನೋಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ದ.ಆಫ್ರಿಕಾದ ಬೌನ್ಸಿ ಪಿಚ್‌ಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎಂಬ ಕುತೂಹಲವಿದೆ. ಶ್ರೇಯಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ವಿಕೆಟ್ ಕೀಪರ್ ಆಗಿ ಕೆ.ಎಲ್. ರಾಹುಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. 5ನೇ ಬೌಲರ್ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಮತ್ತು ಆರ್.ಅಶ್ವಿನ್ ನಡುವೆ ಸ್ಪರ್ಧೆ ಏರ್ಪಡಬಹುದು. ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ಜಾಗ ಸಿಗದೇ ಇರಬಹುದು. ಬುಮ್ರಾ, ಮೊಹಮದ್ ಸಿರಾಜ್ ಅವರನ್ನೊಳಗೊಂಡ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಅನುಭವಿ ಮೊಹಮದ್ ಶಮಿ ಅನುಪಸ್ಥಿತಿ ಕಾರಣ ಆ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಅಥವಾ ಮುಕೇಶ್ ನಡುವೆ ಪೈಪೋಟಿ ಇದೆ.

 

 

ಫ್ರೆಶ್ ನ್ಯೂಸ್

Latest Posts

Featured Videos