350 ವಿಕೆಟ್ ಪಡೆದ ಅಶ್ವಿನ್

350 ವಿಕೆಟ್ ಪಡೆದ ಅಶ್ವಿನ್

ವಿಶಾಖಪಟ್ಟಣಂ, ಅ.6 : ಟೀ ಇಂಡಿಯಾ ಕ್ರಿಕೆಟ್ ಆಟಗಾರಲ್ಲಿ ಒಬ್ಬಬರಾಗಿ ಒಂದಿಲ್ಲೊಂದು ದಾಖಲೆ ಮಾಡುತ್ತಿದ್ದಾರೆ, ಬ್ಯಾಟ್ಸ್ ಮ್ಯಾನಗಳ ದಾಖಲೆ ಬರೆಯುತ್ತಿದ್ದರೆ ಇತ್ತ ಬೌಲರ್ ಸಹ ದಾಖಲೆ ಮಾಡುತ್ತಿದ್ದಾರೆ. ಒಂದೇ ಇಂನಿಗ್ಸ್ ನಲ್ಲಿ 2 ಶತಕ ಬಾರಿಸಿ ದಾಖಲೆ ಮಾಡಿದ್ದರೆ, ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತಿ ವೇಗವಾಗಿ 350 ವಿಕೆಟ್ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರ್ ಅವರ ದಾಖಲೆ ಸರಿಗಟ್ಟಿದ್ದಾರೆ.
ಇಲ್ಲಿನ ಡಾ.ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಐದನೇ ದಿನ ಅಶ್ವಿನ್ ಈ ಸಾಧನೆ ಮಾಡಿದ್ದಾರೆ. 10 ರನ್ ಗಳಿಸಿ ಆಡುತ್ತಿದ್ದ ಥ್ಯೂನಿಸ್ ಡಿ ಬ್ರೂಯಿನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುತಿದ್ದಂತೆ ಆರ್. ಅಶ್ವಿನ್ ಅವರ ಟೆಸ್ಟ್ ಕ್ರಿಕೆಟ್ನಲ್ಲಿ 350ವಿಕೆಟ್ ಮುಡಿಗೇರಿಸಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos